ಉದಯವಾಹಿನಿ, ಕಲಬುರಗಿ: ಇತ್ತೀಚಿಗೆ ಪಿಡಿಎ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಮತ್ತು ಪ್ರೈಮರಿ ಹೆಲ್ತ್ ಸೆಂಟರ್ ಇಂಜಿನಿಯರಿಂಗ್ ಕಾಲೇಜ್ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಈ ಶಿಬಿರದಲ್ಲಿ ಕಾಲೇಜಿನ ಸುಮಾರು 100 ವಿದ್ಯಾರ್ಥಿಗಳು ರಕ್ತದಾನ ಮಾಡಿದರು ಕಾಲೇಜಿನ ಪ್ರಾಚಾರ್ಯರಾದ ಡಾ ಶಶಿಕಾಂತ್ ಆರ್ ಮೀಸೆ ಉಪ ಪ್ರಾಚಾರ್ಯರಾದ ಡಾಕ್ಟರ್ ಕಲ್ಪನಾ ವಾನ್ಜರ್ ಕೇಡೆ , ಡಾ. ಭಾರತಿ ಹರಸೂರ್ ಶಿಬಿರದ ಸಂಚಾಲಕರಾದ ಪೆÇ್ರ ರವೀಂದ್ರ ಕಾಂತ ಮತ್ತು ಲಕ್ಷ್ಮಿಕಾಂತ್ ಕಾಂತರಾಜ್ ಆನಂದ್ ಪಾಟೀಲ್ ಉಪಸ್ಥಿತರಿದ್ದರು ಬಸವೇಶ್ವರ ಆಸ್ಪತ್ರೆಯ ರಕ್ತ ನಿಧಿ ವಿಭಾಗ ಡಾ ಶ್ರೀ ಗೌರಿ ಡಾ ಜೋಯೆಲ್ ಮತ್ತು ಪರಮೇಶ್ವರ್ ಗುಡ್ಡ ಸೇರಿದಂತೆ ಇತರರು ಕಾರ್ಯಕ್ರಮವನ್ನು ನಡೆಸಿಕೊಟ್ಟರು
