ಉದಯವಾಹಿನಿ, ಕೂಡ್ಲಿಗಿ : ತಾಲೂಕಿನ ಹಾರಕಬಾವಿ ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ದೇವಿಯ ಕಾರ್ತಿಕ ಹಾಗೂ ರಥೋತ್ಸವ (ಉಚ್ಚಾಯ) ಭಾನುವಾರ ಅದ್ದೂರಿಯಾಗಿ ನೆರವೇರಿತು. ನಂದಿಕೋಲು ಕುಣಿತ, ಮಂಗಳವಾದ್ಯ ಸೇರಿ ನಾನಾ ಕಲಾ ತಂಡಗಳೊಂದಿಗೆ ಪಾದಗಟ್ಟೆಯವರೆಗೆ ಉಚ್ಚಾಯ ರಥವನ್ನು ಎಳೆಯಲಾಯಿತು. ಗ್ರಾಮದ ಹಿರಿಯರ ಸಮ್ಮುಖದಲ್ಲಿ ಶನಿವಾರ ರಾತ್ರಿ ದೇವಸ್ಥಾನದಲ್ಲಿ ಕಾರ್ತಿಕ ದೀಪ ಹಚ್ಚಿದ್ದು, ಪೂಜಾ ವಿಧಿ, ವಿಧಾನಗಳನ್ನು ನೆರವೇರಿಸಲಾಯಿತು. ಭಾನುವಾರ ಬೆಳಗ್ಗೆಯಿಂದ ಶ್ರೀ ಚೌಡೇಶ್ವರ ದೇವಿ ದೇವಸ್ಥಾನದಲ್ಲಿ ಭಕ್ತರು ಹಣ್ಣು,ಕಾಯಿ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು. ಹಾರಕಬಾವಿ, ಶಾಂತನಹಳ್ಳಿ, ಎಂ.ಬಿ.ಅಯ್ಯನಹಳ್ಳಿ, ಬಣವಿಕಲ್ಲು, ನಿಂಬಳಗೆರೆ, ಬೆಳ್ಳೆಕಟ್ಟೆ, ಸೂಲದಹಳ್ಳಿ ಸೇರಿ ನಾನಾ ಹಳ್ಳಿಗಳಿಂದ ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಎಸ್.ಶೇಖರಪ್ಪ, ಈಶಪ್ಪ ಮೇಷ್ಟು, ಮುನಿಯಪ್ಪ, ಜಾತಪ್ಪ, ಸಿದ್ಧಲಿಂಗಪ್ಪ, ಕೋಟೇಶ್, ಮಾಯಣ್ಣ, ಕುಮಾರಸ್ವಾಮಿ, ಎಸ್.ಕೊಟ್ರೇಶ್, ಶೇಖರಪ್ಪ, ಜಂಬಣ್ಣ ಮೇಷ್ಟು, ಸಣ್ಣ ಮೂಗಣ್ಣ, ಮಂಜುನಾಥ, ಮಲ್ಲೇಶ್, ನಿವೃತ್ತ ಉಪ ಪ್ರಾಚಾರ್ಯ ಸಿ. ಮಹಾಲಿಂಗಪ್ಪ, ಕೆಎಂಎಫ್ ನಿರ್ದೇಶಕ ಮರುಳಸಿದ್ದಪ್ಪ, ಪೂಜಾರಿ ಅಜ್ಜಯ್ಯ ಸೇರಿ ಇತರರಿದ್ದರು.

Leave a Reply

Your email address will not be published. Required fields are marked *

error: Content is protected !!