ಉದಯವಾಹಿನಿ, ಕೋಲಾರ: ರಾಜ್ಯ ಸರ್ಕಾರದ ೪ ಗ್ಯಾರೆಂಟಿ ಯೋಜನೆಗಳಿಂದ ೪.೩೦ ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದಿದ್ದಾರೆ ಜನವರಿ ಮೊದಲವಾರದಲ್ಲಿ ೫ನೇ ಗ್ಯಾರೆಂಟಿ ಯೋಜನೆಯಾದ ಯುವನಿಧಿ ಯೋಜನೆಯ ಗೌರವ ಧನ ಪಡೆಯಲು ನಿರುದ್ಯೋಗಿ ಪದವೀದರರು ಮತ್ತು ಐ.ಟಿ.ಐ. ಪಡೆದಿರುವವರ ನೊಂದಣೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಕಾಂಗ್ರೇಸ್ ಪಕ್ಷದ ವೆಂಕಟಪತಪ್ಪ ತಿಳಿಸಿದರು,
ಮಾದ್ಯಮದವರೊಂದಿಗೆ ಅವರು ಮಾತನಾಡಿ ಸರ್ಕಾರ ನೀಡಿದ್ದ ಭರವಷೆಯಂತೆ ೫ನೇ ಗ್ಯಾರೆಂಟಿಯನ್ನು ಜಾರಿಗೊಳಿಸಲಿದೆ.ಕಾಂಗ್ರೇಸ್ ಪಕ್ಷವು ಅಧಿಕಾರಕ್ಕೆ ಬಂದ ಮೊದಲ ಸಂಪುಟದಲ್ಲಿಯೇ ೪ ಗ್ಯಾರೆಂಟಿ ಯೋಜನೆಗಳನ್ನು ಹಂತ,ಹಂತವಾಗಿ ಜಾರಿಗೊಳಿಸಲು ನಿರ್ಧಾರ ಕೈಗೊಂಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಮಹಿಳೆಯರಿಗೆ ಶಕ್ತಿ ಯೋಜನೆಯಡಿ ೧೧೪.೫೪ ಕೋಟಿ ಮಹಿಳೆಯರು ಸರ್ಕಾರದ ಉಚಿತ ಬಸ್ ಯೋಜನೆಯಡಿ ಪ್ರಯಾಣಿಸುವ ಮೂಲಕ ಸದ್ಬಳಿಸಿ ಕೊಂಡಿದ್ದಾರೆ. ಪ್ರತಿ ದಿನ ೬೦ ರಿಂದ ೬೨ ಲಕ್ಷ ಮಹಿಳೆಯರು ಉಚಿತ ಸರ್ಕಾರ ಬಸ್ ಪ್ರಯಾಣದ ಸೇವೆಯನ್ನು ಪಡೆಯುತ್ತಿದ್ದಾರೆ. ಇದುವರೆಗೂ ೧೧೪.೫೪ ಕೋಟಿ ಮಹಿಳೆಯರು ಈ ಸೇವೆಯನ್ನು ಪಡೆದಿದ್ದಾರೆ.ಇದರ ವೆಚ್ಚ ೨೭೦೦ ಕೋಟಿ ರೂಗಳಾಗಿದೆ.
ಗೃಹ ಜ್ಯೋತಿ ಮಾಸಿಕವಾಗಿ ೨೦೦ ಯೂನಿಟ್‌ವರೆಗೆ ವಿದ್ಯುತ್ ಉಪಯೋಗಿಸಿದ ರಾಜ್ಯದ ೧ ಕೋಟಿ ೬೦ ಲಕ್ಷ ಕುಟುಂಬಗಳ ಗ್ರಾಹಕರು ಗೃಹ ಜ್ಯೋತಿ ಯೋಜನೆ ಪ್ರಯೋಜನವನ್ನು ಪಡೆದು ಕೊಂಡಿದ್ದಾರೆ. ಇದರಿಂದ ತಿಂಗಳಿಗೆ ೮೦೦ ಕೋಟಿ ರೂ ಸರ್ಕಾರಕ್ಕೆ ವೆಚ್ಚವಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!