ಉದಯವಾಹಿನಿ, ಕೋಲಾರ: ಮಾಲೂರು ತಾಲೂಕಿನ ಯಲುವಗುಳಿ ಗ್ರಾಮದ ವಸತಿ ಶಾಲೆಯಲ್ಲಿ ವಸತಿ ಶಾಲೆಯಲ್ಲಿ ಸುಮಾರು ೨೫೦ ಜನ ಮಕ್ಕಳಿದ್ದು, ಕಳೆದ ಹಲವು ದಿನಗಳಿಂದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ವಿವಿದ ರೀತಿಯಲ್ಲಿ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಅಭಿಷೇಕ್ ಹಾಗೂ ವಾರ್ಡನ್ ಮಂಜುನಾಥ್ ಸೇರಿ ಕೆಲವು ಶಿಕ್ಷಕರಿಂದ ಮಕ್ಕಳಿಗೆ ಕಿರುಕುಳ ಆರೋಪಗಳೂ ಕೇಳಿ ಬಂದಿದೆ.
ಮಕ್ಕಳಿಗೆ ಹೊಡೆಯುವುದು, ಮಕ್ಕಳನ್ನು ರಾತ್ರಿ ಹೊತ್ತಿನಲ್ಲಿ ಬ್ಯಾಗ್ ಹೊರಿಸಿ ಕೂರಿಸಿ ಹಿಂಸೆ ನೀಡುವುದರೊಂದಿಗೆ ಕಿರುಕುಳ ನೀಡುವ ಪಿಟ್ ಕ್ಲೀನ್ ಮಾಡಿರುವ ದೃಶ್ಯಗಳು ಲಭ್ಯವಾದ ಹಿನ್ನಲೆಯಲ್ಲಿ ವಸತಿ ನಿಲಯಕ್ಕೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಬೇಟಿ ಪರಿಶೀಲನೆ ನಡೆದ ಸಂದರ್ಭದಲ್ಲಿ ಮಕ್ಕಳಿಗೆ ಕಿರುಕುಳ ನೀಡಿರುವ ಶಿಕ್ಷಕರ ವಿರುದ್ದ ಕ್ರಮಕೈಗೊಳ್ಳಬೇಕೆಂದು ವಿದ್ಯಾರ್ಥಿಗಳ ಪೋಷಕರ ಆಗ್ರಹಿಸಿದ್ದಾರೆ.
ವಸತಿ ಶಾಲೆಯಲ್ಲಿ ಹೆಣ್ಣು ಮಕ್ಕಳ ಖಾಸಗಿ ಫೋಟೋ ಆರೋಪದ ಕುರಿತ ಆ ರೀತಿಯ ವಿಚಾರ ನನ್ನ ಬಳಿಗೆ ಬಂದಿಲ್ಲ, ಪ್ರಾಥಮಿಕ ತನಿಖೆಯಲ್ಲಿ ನನ್ನ ಗಮನಕ್ಕೆ ಬಂದಿಲ್ಲ, ಪೋಷಕರನ್ನು ಕೇಳಿದ್ದೇನೆ ಫೋಟೋ ಬಗ್ಗೆ ಯಾರು ಸ್ಪಷ್ಟನೆ ನೀಡಿಲ್ಲ, ಆ ರೀತಿ ಏನಾದರೂ ಇದ್ದರೆ ಕ್ರಿಮಿನಲ್ ಕೇಸ್ ದಾಖಲಾಗುತ್ತೆ ಎಂದು ಜಂಟಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ ಶ್ರೀನಿವಾಸ್ ತಿಳಿಸಿದರು.
ಈಗಾಗಲೇ ಪ್ರಾಂಶುಪಾಲೆ ಭಾರತಮ್ಮ, ಶಿಕ್ಷಕ ಮುನಿಯಪ್ಪ, ವಾರ್ಡನ್ ಮಂಜುನಾಥ್ ಅಮಾನತ್ತು ಆಗಿದ್ದಾರೆ ಹಾಗೂ ಗುತ್ತಿಗೆ ಆಧಾರದ ಮೇಲಿರುವ ಅಭಿಷೇಕ್‌ನನ್ನು ವಜಾ ಮಾಡುತ್ತೇವೆ ಎಂದು ತಿಳಿಸಿದ ಅವರು ಯಾವುದೇ ಮುಲಾಜಿಲ್ಲದೆ ಕ್ರಮ ಆಗುತ್ತೆ, ಘಟನೆ ಸಂಬಂಧ ಎಫ್‌ಐಆರ್ ದಾಖಲು ಮಾಡುತ್ತೇವೆ ಎಂದು ತಿಳಿಸಿದರು.
