ಉದಯವಾಹಿನಿ, ಬೆಂಗಳೂರು: ರಸ್ತೆ ಕಾಮಗಾರಿಗೆ ಜಾಗ ನೀಡುವ ರೈತರಿಗೆ ಸರ್ಕಾರದಿಂದ ನಿವೇಶನ ನೀಡಲಾಗುವುದೆಂದು ಶಾಸಕ ಎಸ್.ಆರ್.ವಿಶ್ವನಾಥ್ ಇಂದಿಲ್ಲಿ ತಿಳಿಸಿದರು.
ಯಲಹಂಕ ಕ್ಷೇತ್ರದ ಮಾದಪ್ಪನಹಳ್ಳಿ, ಮಾವಳ್ಳಿಪುರ ,ಗೋಪಾಲಪುರದಲ್ಲಿ ಸುಮಾರು ೧೬ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ನಂತ ಮಾತನಾಡಿದ ಅವರು, ರೈತರು ರಸ್ತೆ ಅಗಲೀಕರಣಕ್ಕೆ ಸಹಕರಿಸುತ್ತಿದ್ದು, ೨೦ಅಡಿ ಜಾಗ ಬಿಟ್ಟಿದ್ದಾರೆ. ರಸ್ತೆಗೆ ಜಾಗ ನೀಡುವ ರೈತರಿಗೆ ಸರ್ಕಾರದಿಂದ ಕೊಡುವ ಹಣದ ಜೊತೆಗೆ ನಿವೇಶನವನ್ನು ನೀಡಲಾಗುವುದು ಎಂದರು.
ರಸ್ತೆ ಅಗಲವಾದಂತೆ ಭೂಮಿಗೆ ಬೆಲೆ ಬರುತ್ತದೆ. ಹೀಗಾಗಿ, ರಸ್ತೆ ಅಗಲೀಕರಣಕ್ಕೆ ಸಹಕರಿಸಬೇಕು. ಸಾರ್ವಜನಿಕರ ಬಹಳ ದಿನಗಳ ಬೇಡಿಕೆಯಂತೆ ಇಂದು ಮಾದಪ್ಪನಹಳ್ಳಿ, ಮಾವಳ್ಳಿಪುರ ,ಗೋಪಾಲಪುರದಲ್ಲಿ ಸುಮಾರು ೧೬ಕೋಟಿ ರೂ. ಅಂದಾಜು ವೆಚ್ಚದಲ್ಲಿ ರಸ್ತೆ ಕಾಮಗಾರಿ ಗೋಪಾಲಪುರದಲ್ಲಿ ೬.೫ಕೋಟಿ ರೂ ವೆಚ್ಚದಲ್ಲಿ ವಿದ್ಯಾರ್ಥಿ ನಿಲಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ್ದೇವೆ ಎಂದು ಹೇಳಿದರು.
ಬಿಜೆಪಿ ಅನುದಾನ: ಕಳೆದ ಸರ್ಕಾರದ ಅನುದಾನದಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ.
ಕಳೆದ ೭ತಿಂಗಳಿನಿಂದ ಅನುದಾನ ಬಿಡುಗಡೆಯಾಗಿಲ್ಲ. ಬಿಜೆಪಿ ಸದಸ್ಯರಿಗೆ ೧೦ಕೋಟಿ ರೂ ಅನುದಾನ ನೀಡುತ್ತೇವೆಂದು ಕಾಂಗ್ರೆಸ್ ಸರ್ಕಾರ ಹೇಳಿದೆ. ಕೂಡಲೇ ಅನುದಾನ ಬಿಡುಗಡೆಮಾಡಬೇಕು. ಬರಗಾಲವಾಗಿರುವುದರಿಂದ ಬೋರ್ ವೆಲ್ ಕೊರಸಲು ಅನುದಾನ ಬಿಡುಗಡೆಮಾಡಬೇಕು ಎಂದರು.
