ಉದಯವಾಹಿನಿ, ಬೆಂಗಳೂರು: ಕಡಿಮೆ ಬೆಲೆಗೆ ಚಿನ್ನ ಮಾರಾಟದ ಆಸೆ ಹುಟ್ಟಿಸಿ ಕರೆಸಿಕೊಂಡ ಪಾನ್ ಬ್ರೋಕರ್ ಗೆ ಮಚ್ಚಿನಿಂದ ಹಲ್ಲೆ ಮಾಡಿ ಬೆದರಿಸಿ ೬೦ ಲಕ್ಷ ರೂ ನಗದನ್ನು ಕಸಿದು ಪರಾರಿಯಾಗಿದ್ದ ಐವರು ದುಷ್ಕರ್ಮಿಗಳನ್ನು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡು ಬಂಧಿಸುವಲ್ಲಿ ಬಸವೇಶ್ವರನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳಿಂದ ಪಾನ್ ಬ್ರೋಕರ್ ಸಂಕೀತ್ ನಿಂದ ದೋಚಿದ್ದ ೬೦ ಲಕ್ಷದಲ್ಲಿ ೫೩ ಲಕ್ಷ ನಗದು,ಕಾರು ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ತಿಳಿಸಿದ್ದಾರೆ.
ಬಂಧಿತ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಪಾನ್ ಬ್ರೋಕರ್ ಸಂಕೇತ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದು ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿದೆ ಎಂದು ಹೇಳಿದರು.
ಕಳೆದ ಡಿ.೧೧ ರಂದು ಬಸವೇಶ್ವರ ನಗರದ ಆದರ್ಶ್ ಲೇಔಟ್‌ನ ಹಳೆಯ ರಿಜಿಸ್ಟರ್ ಕಚೇರಿಯ ಸಿದ್ದಪ್ಪಾಜಿ ಗ್ರಂಥಾಲಯದ ಹತ್ತಿರ ಕಡಿಮೆ ಬೆಲೆಗೆ ಚಿನ್ನವನ್ನು ಮಾರಾಟ ಮಾಡುವ ನೀಡುವುದಾಗಿ ಕೆ.ಜಿ.ಎಫ್ ನ ರಾಬರ್ಟ್ ಸನ್ ಪೇಟೆಯ ಪಾನ್ ಬ್ರೋಕರ್ ಸಂಕೇತ್ ನನ್ನು ನಂಬಿಸಿದ್ದರು.ಕಡಿಮೆ ಬೆಲೆಗೆ ಚಿನ್ನ ಸಿಗುವ ಆಸೆಗೆ ಸಂಬಂಧಿಕರು ಸ್ನೇಹಿತರ ಬಳಿ ಹಣ ಹೊಂದಿಸಿ ೬೦ ಲಕ್ಷ ಹಣದ ಜೊತೆ ಬಂದ ಸಂಕೇತ್ ಗೆ ಮಚ್ಚಿನಿಂದ ಹಲ್ಲೆ ಮಾಡಿ ಬೆದರಿಸಿ ಆತನ ಬಳಿಯಿದ್ದ ೬೦ ಲಕ್ಷ ರೂ ಹಣವಿದ್ದ ಬ್ಯಾಗ್ ಕಸಿದು ಪರಾರಿಯಾಗಿದ್ದರು.
