ಉದಯವಾಹಿನಿ, ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮತ್ತು ಮುಜರಾಯಿ ಸಚಿವರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲ್ದರ್ಜೆಗೇರಿಸಿದ ಮುದ್ರಣಾಲಯ, ಕ್ರೀಡಾ ಸಂಕೀರ್ಣ ವನ್ನು ಉದ್ಗಾಟಿಸಿದರು ಹಾಗೂ ಅವಘಡಗಳ ಸಂಧರ್ಭದಲ್ಲಿ ತುರ್ತು ಬಳಕೆ ಹಾಗೂ ಘಟಕ-ವಿಭಾಗಗಳಲ್ಲಿ ಸುಸೂತ್ರ ಕಾರ್ಯಚರಣೆಗಾಗಿ ನೂತನ ೧೫ ಬೊಲೆರೋ ಜೀಪುಗಳಿಗೆ ಚಾಲನೆ ನೀಡಿದರು.
ನಿಗಮವು ೧೯೫೨ ರಲ್ಲಿ ಮುದ್ರಣಾಲಯವನ್ನು ಪ್ರಾರಂಭಿಸಿದೆ .ಟಿಕೇಟ್‌ಗಳು, ಪಾಸ್‌ಗಳು ಹಾಗೂ ಲೇಖನ ಸಾಮಗ್ರಿಗಳ ಮುದ್ರಣ ಹಾಗೂ ಸರಬರಾಜು ಕಾರ್ಯಕ್ಕಾಗಿ ಮುದ್ರಣಾಲಯವನ್ನು ಪ್ರಾರಂಭಿಸಲಾಗಿದೆ.
ಪ್ರಸ್ತುತ ಮುದ್ರಣಾಲಯದಲ್ಲಿ ಟಿಕೆಟ್, ಇ.ಟಿ.ಎಂ ರೋಲ್‌ಗಳು ಗಣಕ ಯಂತ್ರ ಲೇಖನ ಸಾಮಾಗ್ರಿ, ೧೭೬ ಬಗೆಯ ಮುದ್ರಣ ಸಾಮಗ್ರಿಗಳು, ವಾರ್ಷಿಕ ಆಡಳಿತ ಮತ್ತು ಲೆಕ್ಕ ಪತ್ರ ಪುಸ್ತಕಗಳು, ಲೆಟರ್ ಹೆಡ್, ವಿಸಿಟಿಂಗ್ ಕಾರ್ಡ್, ಕರ ಪತ್ರಗಳು ಇತ್ಯಾದಿ ಮುದ್ರಣ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ ರೂ ೭೫ ಲಕ್ಷ ಮೌಲ್ಯದ ಇ.ಟಿ.ಎಂ ಟಿಕೆಟ್ ರೋಲ್‌ಗಳನ್ನು ಮುದ್ರಿಸಿ ವಿಭಾಗಗಳಿಗೆ ಸರಬರಾಜು ಮಾಡುತ್ತಿದೆ. ಮುದ್ರಣಾಲಯವು ಪ್ರತಿ ವರ್ಷ ರೂ.೧೫ ಕೋಟಿಗಳ ವಹಿವಾಟನ್ನು ನಿರ್ವಹಿಸುತ್ತಿದೆ. ಪ್ರಸ್ತುತ ಮುದ್ರಣಾಲಯದ ಕಟ್ಟಡದಲ್ಲಿ ಕೆಳಕಂಡ ಕಾಮಗಾರಿಗಳನ್ನು ನಿರ್ವಹಿಸಿ ರೂ.೩೯.೮೩ ಲಕ್ಷಗಳ ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗಿದೆ.
