ಉದಯವಾಹಿನಿ,ಕೋಲಾರ: ಜಿಲ್ಲಾ ತಿಗಳ ಜನಾಂಗದ ಸಮನ್ವಯ ಸಮಿತಿ ವತಿಯಿಂದ ಭಾನುವಾರದಂದು ಕೋಲಾರದ ಸಹ್ಯಾದ್ರಿ ಕಾಲೇಜಿನಲ್ಲಿ ಜಿಲ್ಲೆಯ ಜನಾಂಗದ ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ೧೨೦ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪುರಸ್ಕರಿಸಲಾಯಿತು.
ವೇದಿಕೆಯಲ್ಲಿದ್ದ ಅತಿಥಿಗಳು ತಮ್ಮ ಭಾಷಣದಲ್ಲಿ ಜನಾಂಗದ ಏಳಿಗೆ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ಕೊಟ್ಟು ತಮ್ಮೆಲ್ಲರ ಜೊತೆಯಲ್ಲಿರುವೆವು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ತಿಗಳರ ಸಂಘಕ್ಕೆ ಅವಿರೋಧವಾಗಿ ಆಯ್ಕೆಯಾದ ಜಿಲ್ಲೆಯ ೭ ನಿರ್ದೇಶಕರಾದ ನರಸಾಪುರ ಎನ್.ವಿ.ಗೋಪಿ, ಕೋಲಾರ ಆರ್.ಗುಣಶೇಖರ್ (ಗುರು), ವೇಮಗಲ್ ವೆಂಕಟೇಶ್(ವಿನಯ್), ಮುಳಬಾಗಿಲು ವೆಂಕಟೇಶ್, ಬಂಗಾರಪೇಟೆ ಕುಮರೇಶ್, ಮಾಲೂರು ಮಂಜು ಮತ್ತು ಮಾಲೂರಿನ ಈಶ್ವರ್‌ರನ್ನು ಸನ್ಮಾನಿಸಲಾಯಿತು.
ಗ್ರಾಮ ಪಂಚಾಯ್ತಿಗಳಲ್ಲಿ ಹೊಸದಾಗಿ ಆಯ್ಕೆಯಾದ ಕಾರಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ನಾರಾಯಣಸ್ವಾಮಿ, ಮುದುವತ್ತಿ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಅಮರ್ ಸೇರಿದಂತೆ ಜಿಲ್ಲೆಯ ದೇವಾಲಯದ ಗೌಡರು ಯಜಮಾನರನ್ನು ಸಹ ಸನ್ಮಾನಿಸಲಾಯಿತು.
