ಉದಯವಾಹಿನಿ, ಚನ್ನಮ್ಮನ ಕಿತ್ತೂರ,: ಅಯೋಧ್ಯ ರಾಮಮಂದಿರ ಉದ್ಘಾಟನೆ ನಿಮಿತ್ತ ಅಯೋಧ್ಯೆ ಇಂದ ಬಂದ ಅಕ್ಷತಾ, ಕಳಶವು, ವಿಶ್ವ ಹಿಂದೂ ಪರಿಷತ್ ಭಜರಂಗ ದಳ ಜಿಲ್ಲಾ ಕೇಂದ್ರದಿಂದ ಕಿತ್ತೂರಿನ ರಾಣಿ ಚನ್ನಮ್ಮನ ವರ್ತುಲಕ್ಕೆ ಆಗಮಿಸಿತು,
ಚನ್ನಮ್ಮ ವರ್ತುಲದಿಂದ ಪಟ್ಟಣದ ಮುಖ್ಯಬೀದಿಯಿಂದ ಕಲ್ಮಠದವರೆಗೆ ಶ್ರದ್ಧಾ ಭಕ್ತಿಯಿಂದ ಬರಮಾಡಿಕೊಳ್ಳಲಾಯಿತು.
ಜನೆವರಿ 1 ನೇ ತಾರೀಕಿನವರೆಗೂ ಕಲ್ಮಠದಲ್ಲಿದ್ದು ಎಲ್ಲ ಭಕ್ತಾದಿಗಳಿಗೆ ಪೂಜಿಸಲು ಅವಕಾಶವಿರುತ್ತದೆ. ಜನೆವರಿ 1 ನೇ ತಾರೀಕಿನ ನಂತರ ತಾಲೂಕಿನ ಪ್ರತಿ ಗ್ರಾಮಗಳ ಮನೆ ಮನೆಗೂ ಅಕ್ಷತೆಯನ್ನು ತಲುಪಿಸಲಾಗುವದು ಎಂದು ವಿಶ್ವ ಹಿಂದೂ ಪರಿಷದ ಬಜರಂಗದಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿ 22ರಂದು ಅಯೋಧ್ಯೆಗೆ ಹೋಗಿ ಉದ್ಘಾಟನೆಗೆ ತಲುಪಲು ಆಗದೆ ಇರುವ ಕಾರಣ ಪ್ರತಿ ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಉದ್ಘಾಟನೆಗೆ ಅನುವು ಮಾಡಿಕೊಡಬೇಕೆಂದು ವಿನಂತಿಸಿದರು.
ಈ ವೇಳೆ ಕಾರ್ಯದರ್ಶಿ ನಾಗಪ್ಪ ತುಬಾಕಿ, ಸಹ ಕಾರ್ಯದರ್ಶಿ ಸಾಗರ ಕಾಮಕರ ಪ್ರಮುಖ ಸಂತೋಷ ಪರೀಟ್, ಬಜರಂಗದಳ ನಗರ ಸಂಯೋಜಕ ಶಿವಯೋಗಿ ಹಿರೇಮಠ, ಆರ್,ಎಸ್,ಎಸ್ ಕಾರ್ಯಕರ್ತ ಸಂತೋಷ ಪಡ್ಡಾದ,
ಪ್ರಶಾಂತ ಕಲಾಲ ಹಾಗೂ ಸಂಘಟನೆ ಕಾರ್ಯಕರ್ತರು ಸೇರಿದಂತೆ ಬಿಜೆಪಿ ಮುಖಂಡರು, ಗಣ್ಯರು ಇದ್ದರು.
