ಉದಯವಾಹಿನಿ, ಅಫಜಲಪುರ: ಪಟ್ಟಣದ ಮಾರ್ಗವಾಗಿ ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿಯ ಮಲ್ಲಾಬಾದ ಕಡೆಗೆ ಹೋಗುತ್ತಿದ್ದ ಕಮಾಂಡರ್ ಜೀಪ್ ಮತ್ತು ಕಲಬುರ್ಗಿಯಿಂದ ಅಫಜಲಪುರ ಮಾರ್ಗವಾಗಿ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ತಡರಾತ್ರಿ 11.30 ರ ಸುಮಾರಿಗೆ ನಡೆದಿದೆ.
ಮೃತರನ್ನು ಆಳಂದ ತಾಲೂಕಿನ ಮಾಡಿಯಾಳ ಗ್ರಾಮದ ಸಂತೋಷ ತಂದೆ ಹೂವಣ್ಣ ಗೌಡಗಾಂವ (40), ಶಂಕರ ತಂದೆ ದೇವಪ್ಪ ಝಳಕಿ (55), ಸಿದ್ದಮ್ಮ ಗಂಡ ಶಂಕರ ಝಳಕಿ (50) ಹಾಗೂ ಇಂಡಿ ತಾಲೂಕಿನ ಸುರಗಿಹಳ್ಳಿ ಗ್ರಾಮದ ಹುಚ್ಚಪ್ಪ ತಂದೆ ಮಹಾಂತೇಶ ದೊಡ್ಡಮನಿ(5) ಎಂದು ಗುರುತಿಸಲಾಗಿದೆ. ಪೂಜಾ ಗಂಡ ಮಹಾಂತೇಶ ದೊಡ್ಡಮನಿ (30) ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪಿಎಸ್‍ಐ ಮಡಿವಾಳಪ್ಪ ಬಾಗೋಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
