ಉದಯವಾಹಿನಿ, ಹುಲಿ ಬಂತು ಹುಲಿ…. ಎಲ್ಲಾ ಓಡಿ…. ಹುಲಿ ಬಂತು ಹುಲಿ…. ಓಡಿ ಓಡಿ…. ಎಲ್ಲೆಡೆ ಇದೇ ಭಯ. ಇದೇ ಭೀತಿ. ಮನೆ ಬಿಟ್ಟು ಹೊರ ಬಂದ್ರು ಭಯ.. ಮನೆಯಲ್ಲಿದ್ರೂ ಭಯ. ಕೆಲಸಕ್ಕೆ ಹೋದ್ರೂ ಭಯ. ಹೀಗೆ ರಾಜ್ಯದ ಜನರ ನಿದ್ದೆಗೆಡಿಸಿದೆ ಈ ಹುಲಿಮಹಾರಾಯ. ಇದೇ ಸಂದರ್ಭದಲ್ಲಿ ಮತ್ತೊಂದು ಹುಲಿ ಜನರಲ್ಲಿ ಆತಂಕ ಹೆಚ್ಚಿಸಿದೆ.
ಇದನ್ನು ಕಂಡು ಜನ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಹೌದು… ಹುಲಿಯೊಂದು ರಸ್ತೆಯಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಹುಲಿ ರಸ್ತೆಯಲ್ಲಿ ಓಡಾಡುತ್ತಿದೆ ಅಂದರೆ ಎಲ್ಲಿ? ಯಾವ ರಸ್ತೆ? ಎನ್ನುವ ಪ್ರಶ್ನೆಯನ್ನು ನೀವು ಥಟ್ ಅಂತ ಕೇಳಿಬಿಡಬಹುದು. ಆದರೆ ಈ ಹುಲಿ ನಿಜವಾದ ಹುಲಿಯಲ್ಲ. ಬದಲಿಗೆ ಹುಲಿಯಂತೆ ಬಣ್ಣ ಹಚ್ಚಿದ ನಾಯಿ.
ಈ ನಾಯಿ ರಸ್ತೆಯಲ್ಲಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳ್ಳಂಬೆಳಿಗ್ಗೆ ಈ ವಿಡಿಯೋ ನೋಡಿದ ಜನ ಬೆಚ್ಚಿ ಬಿದ್ದಿದ್ದಾರೆ. ಇದನ್ನೇ ಹುಲಿ ಅಂದುಕೊಂಡ ಜನ ಮನೆಬಿಟ್ಟು ಹೊರಬರಲು ಹಿಂದೇಟಾಕಿದ್ದಾರೆ. ಇದನ್ನೇ ನಿಜವಾದ ಹುಲಿ ಅಂದುಕೊಂಡು ಭಯಭೀತರಾಗಿದ್ದಾರೆ.
