ಉದಯವಾಹಿನಿ, ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರದಮಾತ ಗ್ರಾಮದ ೧೮ ವರ್ಷದ ತರುಣ್ ಬಾಲಚಂದ್ರ ದುರಂತ ಅಂತ್ಯ ಕಾಣುವಂತಾಗಿದೆ. ಬೆಂಗಳೂರಿನಲ್ಲಿ ನಿರ್ಮಾಣ ಹಂತದ ನಿವೇಶನದಲ್ಲಿ ದುರದೃಷ್ಟಕರ ಘಟನೆ ಸಂಭವಿಸಿದೆ. ತರುಣ್ ಹೋಟೆಲ್ ನಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಆಯತಪ್ಪಿ ಬಿದ್ದು ತಲೆಗೆ ಗಂಭೀರ ಪೆಟ್ಟು ಬಿತ್ತು.
ತರುಣ್ ಅವರನ್ನು ತಕ್ಷಣವೇ ಸ್ಥಳೀಯ ನಸಿರ್ಂಗ್ ಹೋಂಗೆ ದಾಖಲಿಸಲಾಯಿತು. ಹೆಚ್ಚಿನ ಚಿಕಿತ್ಸೆ
ಗಾಗಿ ಬೆಂಗಳೂರಿನ ಕೆಂಗೇರಿಯ ಗ್ಲೆನಿಗಲ್ಸ್ ಆಸ್ಪತ್ರೆಗೆ ಕರೆ ತರಲಾಯಿತು. ತರುಣ್ ಅವರ ಜೀವ ಉಳಿಸಲು ಗ್ಲೆನಿಗಲ್ಸ್ ಅಸ್ಪತ್ರೆಯ ಪರಿಣಿತರ ವೈದ್ಯರ ತಂಡ ಶಸ್ತ್ರ ಚಿಕಿತ್ಸೆ ನಡೆಸಿತು. ದುರದೃಷ್ಟಕರವೆಂದರೆ ತರುಣ್ ಅವರ ಮೆದುಳು ನಿಷ್ಕ್ರೀಯವಾಯಿತು. ವೈದ್ಯಕೀಯ ತಂಡದ ಪ್ರಯತ್ನ ವಿಫಲವಾಯಿತು. ತಂದೆ ಬಾಲಚಂದ್ರ ಮತ್ತು ತಾಯಿ ಲತಾ ಹೃದಯ ವಿದ್ರಾವಕ ಪರಿಸ್ಥಿತಿಗೆ ಸಿಲುಕಿದರು.ಇಂತಹ ಅಸಹನೀಯ ಪರಿಸ್ಥಿತಿಯಲ್ಲೂ ಬಾಲಚಂದ್ರ ಮತ್ತು ಲತಾ ಅವರು ಮಗನ ಎರಡು ಮೂತ್ರಪಿಂಡ, ಒಂದು ಯಕೃತ್ ಮತ್ತು ಹೃದಯವನ್ನು ದಾನ ಮಾಡಲು ಮುಂದಾದರು. ಮೂತ್ರಪಿಂಡವನ್ನು ೩೯ ಮತ್ತು ೩೩ ವರ್ಷದ ಪುರುಷ ರೋಗಿಗಳಿಗೆ ಕಸಿ ಮಾಡಲಾಯಿತು. ಯಕೃತ್ ಅನ್ನು ೩೫ ವರ್ಷದ ಪುರುಷ ಮತ್ತು ಹೃದಯವನ್ನು ೪೯ ವರ್ಷದ ಪುರುಷ ರೋಗಿಗೆ ಯಶಸ್ವಿಯಾಗಿ ಕಸಿ ಮಾಡಲಾಯಿತು.
