ಉದಯವಾಹಿನಿ, ಬೆಂಗಳೂರು: ಬಿಬಿಎಂಪಿಯಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸುತ್ತಿರುವ ನೇರಪಾವತಿ, ಹೊರ ಗುತ್ತಿಗೆ ಪೌರಕಾರ್ಮಿಕರು, ಮೇಲ್ವಿಚರಕರು ಮತ್ತು ಗುತ್ತಿಗೆ ಆಧಾರದಲ್ಲಿರುವ, ಲೋಡರ್ಸ್, ಕ್ಲಿನರ್ಸ್, ವಾಹನ ಚಾಲಕರು ಮತ್ತು ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಕೂಡಲೇ ಖಾಯಂಗೊಳಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದಲ್ಲಿಂದು ಫ್ರೀಡಂ ಪಾರ್ಕಿನ ಮೈದಾನದಲ್ಲಿ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನಗರ ಸಭೆ ಪುರಸಭೆ ಪೌರಕಾರ್ಮಿಕರ ಮಹಾಸಂಘ ನೇತೃತ್ವದಲ್ಲಿ ಜಮಾಯಿಸಿದ ಕಾರ್ಮಿಕರು, ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಲು ರಾಜ್ಯ ಸರ್ಕಾರ ಮುಂದಾಗಬೇಕೆಂದು ಘೋಷಣೆ ಕೂಗಿದರು.
ರಾಜ್ಯ ಸರ್ಕಾರ ಕಳೆದ ಎರಡು ದಶಕಗಳಿಂದ ಪ.ಜಾತಿ, ಪ. ಪಂಗಡ ಹಾಗೂ ಇತರೇ ಹಿಂದೂಳಿದ ಸಮುದಾಯದ ನೌಕರರನ್ನು ನಗರಗಳನ್ನು ಸ್ವಚ್ಛತೆ ಮಾಡಲು ಪೌರಕಾರ್ಮಿಕರಾಗಿ, ಒಳಚರಂಡಿ ಸ್ವಚ್ಛತೆ ಹಾಗೂ ಒಣ ಕಸ ಮತ್ತು ಹಸಿ ಕಸ ವಿಲೇವಾರಿ ಮಾಡಲು ಲೋಡರ್ಸ್, ಕ್ಲಿನರ್ಸ್ ಮತ್ತು ವಾಹನ ಚಾಲಕರಾಗಿ-ಸಹಾಯಕರಾಗಿ ಗುತ್ತಿಗೆದಾರ ಎಂಬ ಮದ್ಯವರ್ತಿಗಳ ಮೂಲಕ ನೇವಿಸಿಕೊಂಡಿರುವುದು ನಿಯಮಬಾಹಿರ ಎಂದು ಪ್ರತಿಭಟನಾಕಾರರು ಆರೋಪಿಸಿದರು.
