ಉದಯವಾಹಿನಿ, ಕೋಲಾರ: ಯಲುವಳ್ಳಿ ಮಲದ ಗುಂಡಿ ಸ್ವಚ್ಚತೆಯಂಥ ಅಕ್ರಮಗಳು ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಶೋಷಿತ ಜಾತಿಗಳ ಮೇಲಿನ ಅಕ್ರಮಗಳು ನಿರಂತರವಾಗಿದೆ ಎಂಬುದಕ್ಕೆ ಇಂಥ ಪ್ರಕರಣಗಳನ್ನು ಮಾದ್ಯಮಗಳೇ ವರದಿ ಮಾಡುತ್ತಿದೆ. ಇಂಥಹ ಘಟನೆಗಳನ್ನು ನಿಯಂತ್ರಿಸಲು ವಿಶೇಷವಾದ ಸಮಿತಿಗಳನ್ನು ರಚಿಸಲು ಕ್ರಮವಹಿಸ ಬೇಕು.
ಮೊರಾರ್ಜಿ ವಸತಿ ಶಾಲೆಯ ಪ್ರತಿ ವಿದ್ಯಾರ್ಥಿಗೆ ೨೭೫ ರೂ ವೆಚ್ಚ ಮಾqಲಾಗುತ್ತಿದೆ. ಬಡ ಮಕ್ಕಳಿಗೆ ಇಂಥಹ ಗುಣಮಟ್ಟದ ಶಿಕ್ಷಣವನ್ನು ಖಾಸಗಿ ಶಾಲೆಗಳಲ್ಲಿ ಕೊಡಿಸಲು ಸಾಧ್ಯವಾಗದೆ ಸರ್ಕಾರದ ವಸತಿ ಶಾಲೆಗಳಿಗೆ ಬರುತ್ತಾರೆ. ಅದರೆ ಶಾಲೆಯವರು ಅವರ ಬಡತನವನ್ನೆ ಬಂಡವಾಳವನ್ನಾಗಿಸಿ ಕೊಂಡು ಶೋಷಣೆ ಮಾಡುತ್ತಿರುವುದು ಖಂಡನೀಯ. ಇಂಥಹ ಪ್ರಕರಣ ವಿರುದ್ದ ಸರ್ಕಾರವು ಕಠಿಣ ಕ್ರಮ ವಹಿಸ ಬೇಕು. ಶಾಲೆಯಿಂದ ಮಕ್ಕಳನ್ನು ಕರೆದು ಕೊಂಡು ಹೋಗಿರುವ ಪೋಷಕರು ವಾಪಾಸ್ಸ್ ಕರೆ ತರಬೇಕೆಂದು ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿಚ್ಚಹಳ್ಳಿ ಶ್ರೀನಿವಾಸ್‌ಮನವಿ ಮಾಡಿದರು,
ಜಿಲ್ಲೆಯಲ್ಲಿ ೨೬ ವಸತಿ ಶಾಲೆಗಳಿದೆ. ಇಂಥಹ ಪ್ರಕರಣಗಳು ರಾಜ್ಯದಾದ್ಯಂತ ಇದೆ. ಜನಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ವಸತಿ ಶಾಲೆಗಳತ್ತ ಗಮನ ಹರಿಸದೆ ನಿರ್ಲಕ್ಷಿಸಿರುವುದೇ ಇಂಥ ಘಟನೆಗಳಿಗೆ ಕಾರಣವಾಗಿದೆ. ಅಗಾಗ್ಗೆ ವಸತಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಿದ್ದರೆ ಎಷ್ಟು ನಿಯಂತ್ರಣವಾಗುತ್ತಿದ್ದವು, ಶಿಕ್ಷಣದ ವ್ಯವಸ್ಥೆಗಳು ಜಾಗೃತ ಗೊಳ್ಳುತ್ತಿದ್ದವು,ಮುಖ್ಯ ಮಂತ್ರಿಗಳು ಇದೇ ೨೭ ರಂದು ಅದಿಮಗೆ ಭೇಟಿ ನೀಡುವ ಸಂದರ್ಭದಲ್ಲಿ ಸಿ.ಪಿ.ಎಂ.(ಐ) ವತಿಯಿಂದ ಮನವಿ ಪತ್ರ ಸಲ್ಲಿಸಿ ಗಮನ ಸೆಳೆಯಲಾಗುವುದು ಎಂದರು,

Leave a Reply

Your email address will not be published. Required fields are marked *

error: Content is protected !!