ಉದಯವಾಹಿನಿ, ಕೋಲಾರ: ಮೊರಾರ್ಜಿ ವಸತಿ ಶಾಲೆಯ ವ್ಯವಸ್ಥೆಗಳು ಹೇಗೆ ನಡೆಯುತ್ತಿದೆ ಎಂಬುವುದು ಈಗ ಕಾಣುತ್ತಿದೆ. ಮಕ್ಕಳಿಗೆ ಹೊಟ್ಟೆ ತುಂಬಾ ಕೊಡುವುದಿಲ್ಲ. ಗುಣಮಟ್ಟ ತೀರಾ ಕಳಪೆ, ಕನಿಷ್ಠ ಮೂಲ ಭೂತ ವ್ಯವಸ್ಥೆಗಳು ಇರುವುದಿಲ್ಲ. ಸರ್ಕಾರವು ಎಲ್ಲಾ ಸೌಲಭ್ಯ ನೀಡಿದರೂ ನಿರ್ವಾಹಣೆಯ ನಿರ್ಲಕ್ಷತೆ ವ್ಯಾಪಕವಾಗಿದೆ.
ಇದು ಕೇವಲ ಯಲುವಳ್ಳಿ ವಸತಿಯಲ್ಲಿ ಮಾತ್ರವಲ್ಲ ರಾಜ್ಯಾದಾದ್ಯಂತ ಬಹುತೇಕ ಹಾಸ್ಟೆಲ್‌ಗಳಲ್ಲಿ ಇದೇ ಅವ್ಯವಸ್ಥೆಗಳಿದೆ. ಮುಖ್ಯವಾಗಿ ಸಿಬ್ಬಂದಿಗಳ, ಆಡುಗೆಯವರ ಕೊರತೆಯನ್ನು ಕಾಣಬಹುದಾಗಿದೆ. ನೇಮಕಾತಿ ಇಲ್ಲದೆ ಹೊರ ಗುತ್ತಿಗೆ ನೇಮಕಾತಿಗಳು ಹೆಚ್ಚಾಗಿದೆ.
ಭ್ರಷ್ಟಚಾರಕ್ಕೆ ಆಡಳಿತ ವರ್ಗ ಬೆಂಬಲವಾಗಿರುವುದು ಸ್ವಷ್ಟವಾಗಿದೆ. ವಸತಿ ಶಾಲೆಗೆ ನೇಮಕ ಮಾಡಿರುವ ಪ್ರಾಂಶುಪಾಲರಿಗೆ, ಶಿಕ್ಷಕರಿಗೆ,ಸಿಬ್ಬಂದಿಗಳಿಗೆ ಸರ್ಕಾರವು ವಸತಿ ಸೌಲಭ್ಯವನ್ನು ನೀಡಿದ್ದರೂ ಸಹ ವಿದ್ಯಾರ್ಥಿಗಳ ವಸತಿ ಶಾಲೆಯ ಬಳಿ ಇರದೆ ಬೇರೆ ಕಡೆ ಇರುತ್ತಾರೆ ಹಾಗಾಗಿ ಸರ್ಕಾರವು ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿರುವ ವಸತಿಗಳೆಲ್ಲವೂ ಖಾಲಿ ಇದ್ದು ಬೀಗ ಜಡಿದಿರುವುದನ್ನು ಕಾಣ ಬಹುದಾಗಿದೆ.
ರಾಜ್ಯದಲ್ಲಿ ಸುಮಾರು ೨.೧೨ ಲಕ್ಷ ವಿದ್ಯಾರ್ಥಿಗಳು ವಸತಿ ಶಾಲೆಯ ಅಶ್ರಯ ಪಡೆದಿದ್ದಾರೆ. ಸರ್ಕಾರವು ಸಕಲ ಸೌಲಭ್ಯಗಳನ್ನು ನೀಡಿದೆ ಇವೆಲ್ಲಾವು ಸಾರ್ವಜನಿಕರ ತೆರಿಗೆ ಹಣದಿಂದ ನೀಡಲಾಗುತ್ತಿದೆ. ಅದರೆ ಇದೆಲ್ಲಾವು ವ್ಯರ್ಥವಾಗದಂತೆ ಗಮನ ಹರಿಸ ಬೇಕಾಗಿದೆ. ಅಧಿಕಾರಿಗಳ ಕೆಲಸವನ್ನು ಚುರುಕುಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳ ಬೇಕಾಗಿದೆ.
ವಿದ್ಯಾರ್ಥಿಗಳ ಪೋಷಕರು ಇಂಥಹ ಪ್ರಕರಣದಿಂದ ಭೀತರಾಗಿದ್ದಾರೆ. ಶಿಕ್ಷಣದಿಂದಲೇ ವಂಚಿತರಾಗುವ ಸಾಧ್ಯತೆಗಳಿದೆ, ಅವರಿಗೆ ವ್ಯವಸ್ಥೆಗಳನ್ನು ಸರಿಪಡೆಸಲಾಗಿದೆ ಎಂಬ ಸ್ಥೆರ್ಯ ಧೆರ್ಯ ನೀಡಿ ವಸತಿ ಶಾಲೆಯಿಂದ ಕರೆದು ಕೊಂಡು ಹೋಗಿರುವವರನ್ನು ವಾಪಾಸ ಕರೆದು ಕೊಂಡು ಬಿಡ ಬೇಕೆಂದು ಮನವಿ ಮಾಡಿದರು,

 

Leave a Reply

Your email address will not be published. Required fields are marked *

error: Content is protected !!