ಉದಯವಾಹಿನಿ, ಚಿಕ್ಕಬಳ್ಳಾಪುರ : ಸೇವಾ ಸಕ್ರಮಾತಿಗೆ ಆಗ್ರಹಿಸಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರ ಹೋರಾಟ ಶನಿವಾರಕ್ಕೆ ೩೧ನೇ ದಿನಕ್ಕೆ ಕಾಲಿಟ್ಟಿದ್ದು ಸಾರ್ವಜನಿಕರಿಗೆ ಕರವಸ್ತ್ರ ವಿತರಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಶನಿವಾರ ಕರವಸ್ತ್ರ ಮಾರಾಟದ ಮೂಲಕ ಪ್ರತಿಭಟನೆಗೆ ಇಳಿದ ಅತಿಥಿ ಉಪನ್ಯಾಸಕರಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂಧನೆ ವ್ಯಕ್ತವಾಯಿತು.
೨೦ ರೂಪಾಯಿ ಮುಖ ಬೆಲೆಯ ಕರವಸ್ತ್ರವನ್ನು ೧೦ ರೂಪಾಯಿಗೆ ಮಾರಿದ ಅತಿಥಿ ಉಪನ್ಯಾಸಕರು ಸಾರ್ವಜನಿಕರ ಬಳಿ ತಮ್ಮ ಅಳಲು ತೋಡಿಕೊಂಡರು.
ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಮುನಿರಾಜು ಎಂ ಅರಿಕೆರೆ ನಮ್ಮ ಬೇಡಿಕೆ ಈಡೇರಬೇಕಾದರೆ ಕಾರ್ಯನಿರತ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ವಿರುದ್ಧವಾಗಿ ಸರಕಾರ ಹೊಸ ಹುದ್ದೆಗಳನ್ನು ಸೃಜಿಸಿ ಸೇರ್ಪಡೆಗೆ ಕಾನೂನು ತಿದ್ದುಪಡಿ ಮಾಡಿ ಅನುಮೋದನೆ ನೀಡಬೇಕು.ಹಾಲಿ ಕಾರ್ಯರ್ನಿಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನೇ ಸೃಜಿಸಿದ ಹೊಸ ಹುದ್ದೆಗಳಲ್ಲಿ ವಿಲೀನಗೊಳಿಸಿ ಸೇವಾ ಸಕ್ರಮಾತಿ ನೀಡಬೇಕಸಿದು ಕಷ್ಟದ ಕೆಲಸವೇನಲ್ಲ. ಇದೊಂದೇ ೪೩೦ ಕಾಲೇಜುಗಳ ಅತಿಥಿ ಉಪನ್ಯಾಸಕರ ಏಕೈಕ ಆಗ್ರಹವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಗಂಭೀರವಾದ ಪ್ರಯತ್ನ ಹಾಕಬೇಕು ಇಲ್ಲವಾದಲ್ಲಿ ಅತಿಥಿ ಉಪನ್ಯಾಸಕರು ತಮ್ಮ ಕುಟುಂಬದೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು. ಈ ವೇಳೆ ಖಜಾಂಚಿ ರಾಜಶೇಖರ್,ಜಯಚಂದ್ರ,ಓಬಳರೆಡ್ಡಿ, ಗಂಗಾಧರ್,ರಾಘವೇಂದ್ರ,ನರಸಿಂಹಮೂರ್ತಿ, ರಘು,ಹರೀಶ್,ಡಾ.ಶ್ರೀನಿವಾಸ್,ಗಗನ್,ರಮೇಶ್,ಮಲ್ಲಿ ಕಾರ್ಜುನ,ಸತ್ಯನಾರಾಯಣ, ಗಂಗಾಧರ್,ರಾಮಾಂಜಿನಪ್ಪ ಇದ್ದರು.
