ಉದಯವಾಹಿನಿ, ಚಾಮರಾಜನಗರ: ಆಹಾರ ಅರಸಿ ಬಂದಅಪರೂಪದ ಪುನುಗು ಬೆಕ್ಕು ಇಲಿ ಬೋನಿನಲ್ಲಿ ಸೆರೆಯಾದಘಟನೆಚಾಮರಾಜನಗರತಾಲೂಕಿನ ನಾಗವಳ್ಳಿ ಗ್ರಾಮದಲ್ಲಿ ನಡೆದಿದೆ.
ನಾಗವಳ್ಳಿ ಗ್ರಾಮದರಾಜು ಎಂಬವರು ಇಲಿಗಳನ್ನು ಸೆರೆ ಹಿಡಿಯಲು ಬೋನನ್ನು ತರಿಸಿ ಇಟ್ಟಿದ್ದರು. ಆಹಾರ ಅರಸಿ ಬಂದ ಅಳಿವಿನಂಚಿನಲ್ಲಿರುವ ಪುನುಗು ಬೆಕ್ಕು ಇಲಿ ಬೋನಿಗೆ ಬಿದ್ದಿದೆ. ಇಂದು ಬೆಳಗ್ಗೆ ರಾಜು ಬಂದು ಗಮನಿಸಿದಾಗ ದಪ್ಪ ಮೂತಿಯ ಬೆಕ್ಕು ಕಂಡು ಹೌಹಾರಿದ್ದಾರೆ.
ಮಾಹಿತಿಅರಿತು ಸ್ಥಳಕ್ಕೆ ದೌಡಾಯಿಸಿದ ಉರಗ ಪ್ರೇಮಿ ಸ್ನೇಕ್‍ಚಾಂಪ್ ಬೋನಿನಲ್ಲಿ ಸೆರೆಯಾಗಿದ್ದ ಪುನುಗು ಬೆಕ್ಕನ್ನು ರಕ್ಷಿಸಿ ಕೆ.ಗುಡಿಅರಣ್ಯ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಪುನುಗು ಬೆಕ್ಕು ಅಪರೂಪದ ವನ್ಯಜೀವಿಯಾಗಿದ್ದು, ಸುಗಂಧ ಹೊರಸೂಸುವ ಅಳಿವಿನಂಚಿನಲ್ಲಿರುವ ಪ್ರಾಣಿಯಾಗಿದೆಎಂದು ಸ್ನೇಕ್‍ಚಾಂಪ್ ತಿಳಿಸಿದ್ದಾರೆ. ಒಟ್ಟಿನಲ್ಲಿಇಲಿಯ ಆಟ ಬೆಕ್ಕಿಗೆ ಪ್ರಾಕಸಂಕಟತಂದೊಡ್ಡಿದ್ದು ಮಾತ್ರ ನಿಜ.
ಪುನುಗು ಬೆಕ್ಕು ಮುಂಗುಸಿಗಳ ಕುಟುಂಬಕ್ಕೆ ಸೇರಿದ ನಿಶಾಚರ ಸಸ್ತನಿಯಾಗಿದೆ. ಇವು ಬೆಕ್ಕಿನಂತೆಯೇದೇಹರಚನೆ, ಉದ್ದನೆಯ ಬಾಲ ಮತ್ತು ಮುಖ ಲಕ್ಷಣ ಹೊಂದಿರುತ್ತವೆ. ಇವುಗಳ ಜನನಾಂಗದಗ್ರಂಥಿಯಿಂದ ಸುಗಂಧದ್ರವ್ಯ ಬಿಡುಗಡೆಆಗುತ್ತದೆ. ಹಳದಿ ಬಣ್ಣದಿಂದಕೂಡಿರುವ ಸುವಾಸನೆಯುಕ್ತ ಮೂತ್ರಜೇನುತುಪ್ಪದಂತಿರುತ್ತದೆ. ಇದನ್ನು ಸುಗಂಧ ದವ್ಯಗಳಲ್ಲಿ ಪರಿಮಳ ಹೆಚ್ಚಿಸುವ
