ಉದಯವಾಹಿನಿ, ಚಿಕ್ಕಬಳ್ಳಾಪುರ: ದೇಹ ದೇವಾಲಯವನ್ನಾಗಿ ಮಾಡಿಕೊಂಡಾಗ ಬದುಕು ಸುಂದರ ಎಂದು ನಿಡುಮಾಮಿಡಿ ಚಿಕ್ಕಬಳ್ಳಾಪುರ ಶಾಖಾಮಠದ ಡಾ. ಶಿವಜ್ಯೋತಿ ಅಭಿಪ್ರಾಯಪಟ್ಟರು.
ಅವರು ಚಿಕ್ಕಬಳ್ಳಾಪುರ ನಗರದ ಸಾಧು ಬಾವಿ ರಸ್ತೆಯ ಶ್ರೀ ದತ್ತಾತ್ರೇಯ ಸಮಾಜ ಸಾಧು ಮಠ ಟ್ರಸ್ಟ್ ವತಿಯಿಂದ ಶ್ರೀ ದತ್ತಾತ್ರೇಯ ಸ್ವಾಮಿಯವರ ೬೪ನೇ ವರ್ಷದ ಸಪ್ತಾಹ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೂರನೇ ದಿನದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅನಾಚಾರ ಮಾಡಿ ದೇವಾಲಯಗಳ ಸುತ್ತುವ ಬದಲು ಇತರ ಒಳಿತನ್ನ ಮಾಡುವ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕು ‘ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡುವೆ ಬಡವನಯ್ಯಎನ್ನ ಕಾಲೇ ಕಂಬ ದೇಹವೇ ದೇಗುಲಶಿರವೇ ಹೊನ್ನ ಕಳಶವಯ್ಯಕೂಡಲ ಸಂಗಮದೇವಾ ಕೇಳಯ್ಯಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಬಸವಣ್ಣನವರ ಈ ವಚನ ಇವತ್ತಿನ ನಿಜ ಸ್ಥಿತಿಯಾಗಿದೆ ಇದನ್ನ ಅರಿತು ಮುನ್ನಡೆಯಬೇಕು ಅಲ್ಲದೆ ನಮ್ಮ ಜೀವನದಲ್ಲಿ ಮನಶಾಂತಿ ಇಲ್ಲವಾದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ,

ನಮ್ಮ ದಿನನಿತ್ಯದ ಒತ್ತಡಗಳ ಜೊತೆಗೆ ಆಧ್ಯಾತ್ಮಿಕ ಚಿಂತನೆಯನ್ನು ರೂಢಿಸಿಕೊಳ್ಳಬೇಕು ಹಾಗಾದಾಗ ಮಾತ್ರ ಜನರಲ್ಲಿ ಸದ್ಗುಣ ಸದ್ಭಾವನೆ ನಮ್ಮಲ್ಲಿ ಉಂಟಾಗಲು ಸಾಧ್ಯವಾಗುತ್ತದೆ ನಮ್ಮ ನಡೆ ನುಡಿಯ ಬಗ್ಗೆ ಇನ್ನಿತರರಿಗೆ ಕಿರಿಕಿರಿ ಉಂಟಾಗದಂತೆ ಜಾಗೃತರಾಗಿರಬೇಕು ನೆಮ್ಮದಿಯನ್ನ ಹುಡುಕಲು ಎಲ್ಲೆಲ್ಲೋ ಹೋಗಬೇಕಾಗಿಲ್ಲ ಆ ನೆಮ್ಮದಿ ನಮ್ಮ ಮನದಲ್ಲಿಯೇ ಇದೆ ಅದನ್ನ ರೂಡಿಸಿಕೊಂಡು ಸಮಸ್ಥಿತಿಯಲ್ಲಿ ಮುನ್ನಡೆಯಬೇಕು ಎಂದರು.ಹಿರಿಯ ಪತ್ರಕರ್ತ ದಯಾಸಾಗರ್ ಮಾತನಾಡಿ ದತ್ತ ಎಂದರೆ ಕೊಡುವುದು ಭಗವಂತ ನಮಗೆ ಕೊಟ್ಟ ಫಲವನ್ನು ಕೈಲಾಗದ ಇನ್ನಿತರರಿಗೂ ಕೊಟ್ಟು ಹಂಚಿಕೊಳ್ಳುವ ಗುಣ ಧರ್ಮವನ್ನು ರೂಡಿಸಿಕೊಳ್ಳಬೇಕು, ದತ್ತಾತ್ರೇಯ ಜಯಂತಿ ಅಂಗವಾಗಿ ನಡೆಯುತ್ತಿರುವ ಇಂತಹ ಸತ್ಕಾರ್ಯಗಳಲ್ಲಿ ಹೆಚ್ಚು ಹೆಚ್ಚು ಭಾಗವಹಿಸುವ ಮೂಲಕ ಹಿತ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬಹುದಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!