ಉದಯವಾಹಿನಿ: ಬೆಂಗಳೂರು :ವಿಶ್ವವನ್ನೇ ತಲ್ಲಣಗೊಳಿಸಿರುವ ಕೊರೊನಾ ರೂಪಾಂತರಿ JN1 ಸೋಂಕು ಕರ್ನಾಟಕಕಕ್ಕೂ ಕಾಲಿಟ್ಟಿದ್ದು, ಬರೋಬ್ಬರಿ 34 ಮಂದಿಗೆ ಒಮಿಕ್ರಾನ್ ಉಪ ತಳಿ ಜೆಎನ್1 ದೃಢಪಟ್ಟಿದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಹಂಚಿಕೊಂಡಿದ್ದು, ರಾಜ್ಯದ 34 ಜೆಎನ್.1 ಪ್ರಕರಣಗಳಲ್ಲಿ, 20 ಬೆಂಗಳೂರು ನಗರ,4 ಮೈಸೂರು, 3 ಮಂಡ್ಯ ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು ಮತ್ತು ಚಾಮರಾಜ ನಗರದಲ್ಲಿ ತಲಾ 1 ಪ್ರಕರಣ ವರದಿಯಾಗಿದೆ. ಇನ್ನೂ, 3 ಸಾವುಗಳು ವರದಿಯಾಗಿದೆ. ನೆರೆಯ ರಾಜ್ಯ ಕೇರಳದಲ್ಲಿ ಹೆಚ್ಚುತ್ತಿರುವ ಕೋವಿಡ್ 19 ಪ್ರಕರಣಗಳು ಮತ್ತು ತಮಿಳುನಾಡಿನಲ್ಲಿ ಜೆಎನ್ .1 ರೂಪಾಂತರದ ವರದಿ ಗಮನದಲ್ಲಿಟ್ಟುಕೊಂಡು, ಕರ್ನಾಟಕದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಇದಲ್ಲದೇ ಕಳೆದ 24 ಗಂಟೆಯಲ್ಲಿ 125 ಮಂದಿಗೆ ಕೊರೋನಾ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!