ಉದಯವಾಹಿನಿ: ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನದ ಅಂಗವಾಗಿ ರೋಟರಿ ಬೆಂಗಳೂರು ಯಲಹಂಕ, ವಿಶ್ವವಾಣಿ ಫೌಂಡೇಶನ್ ಹಾಗೂ ಅಟ್ಟೂರು ವರ್ತಕರ ಸಂಘದವತಿಯಿಂದ ಅಟ್ಟೂರಿನ ಸಮುದಾಯಭವನದಲ್ಲಿ ಉಚಿತ ಆರೋಗ್ಯ ತಪಾಸಣಾ ಆಯೋಜಿಸಲಾಗಿತ್ತು.
ಆರೋಗ್ಯ ಶಿಬಿರವನ್ನು ಬಿಜೆಪಿ ಯುವ ಮುಖಂಡ ವಿಶ್ವವಾಣಿ ಫೌಂಡೇಷನ್ ಟ್ರಸ್ಟಿ ಅಲೋಕ್ ವಿಶ್ವನಾಥ್ ಉದ್ಘಾಟಿಸಿದರು. ಅಟ್ಟೂರು, ರಾಮಗೊಂಡನಹಳ್ಳಿ, ಅನಂತಪುರ ಸೇರಿದಂತೆ ಸುತ್ತಮುತ್ತಲಿನ ನಾಗರೀಕರು ಸರತಿ ಸಾಲಿನಲ್ಲಿ ನಿಂತು ೫೦೦ಕ್ಕೂ ಹೆಚ್ಚು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ರಕ್ತದೊತ್ತಡ ಮಧುಮೇಹ, ಚರ್ಮರೋಗ, ಕಣ್ಣಿನ ತಪಾಸಣೆ, ಕಿಡ್ನಿ ಸಂಬಂಧಿತ ಖಾಯಿಲೆಗಳಿಗೆ ಖ್ಯಾತ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಯಿತು. ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತವಾಗಿ ಔಷಧ ವಿತರಿಸಲಾಯಿತು.ರೋಟರಾಕ್ಟ್ ಕ್ಲಬ್ – ಬಿ.ಎಂ.ಎಸ್. ಯಲಹಂಕ, ದೀಪಾ ಪಾಲಿಕ್ಲಿನಿಕ್ & ಲ್ಯಾಬ್, ಯಲಹಂಕ, ಉಪನಗರ ಶ್ರೀ ವಿದ್ಯಾಸಾಗರ್ ಶಾಲೆ ಅಟ್ಟೂರು, ದಕ್ಷಿಣ ಕನ್ನಡಿಗರ ಸಾಂಸ್ಕೃತಿಕ ಸಂಘ, ಯಲಹಂಕ, ಉಪನಗರ ಸಿರಿ ಸಮೃದ್ಧಿ ಗೋಲ್ಡ್ ಪ್ಯಾಲೆಸ್, ಯಲಹಂಕ, ಉಪನಗರ ಕಂಪಾನಿಯೋ ಬೆಂಗಳೂರು, ಯಲಹಂಕ ನಗರ ಮಂಡಲ ವೈದ್ಯಕೀಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ರೋಟರಿ ಬೆಂಗಳೂರು ಯಲಹಂಕ ಅಧ್ಯಕ್ಷ ಸುಂದರೇಶ್ವರ್, ಕಾರ್ಯದರ್ಶಿ ಶ್ರೀಹರ್ಷ,ಸಮುದಾಯ ಸೇವಕ ಅಶೋಕ್ ಹೆಬ್ಬಾರ್ ಸೇರಿದಂತೆ ಇನ್ನಿತರರಿದ್ದರು.
