ಉದಯವಾಹಿನಿ, ಬೆಂಗಳೂರು: ಇಂದಿನಿಂದ ಹದಿನೈದು ದಿನಗಳ ಕಾಲ ಮಾಲ್ ಆಫ್ ಏಷ್ಯಾ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ. ಈ ಕುರಿತು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಇಂದಿನಿಂದ ಜನವರಿ ೧೫ ರವರೆಗೆ, ಮಾಲ್ ಆಫ್ ಏಷ್ಯಾವನ್ನು ಮುಚ್ಚಲಾಗುವುದು ಮತ್ತು ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬೆಂಗಳೂರಿನ ಯಲಹಂಕ ಹೋಬಳಿಯ ಬ್ಯಾಟರಾಯನಪುರದ ಬಳ್ಳಾರಿ ರಸ್ತೆಯಲ್ಲಿ ಮಾಲ್ ಆಫ್ ಏಷ್ಯಾ ಇದೆ. ಕರ್ನಾಟಕ ರಕ್ಷಣಾ ವೇದಿಕೆಯು ಮಾಲ್ ಮೇಲೆ ದಾಳಿ ಮಾಡಿ ಅದರ ಚಿಹ್ನೆಗಳಲ್ಲಿ ೬೦% ಕನ್ನಡ ಬಳಸಿಲ್ಲ ಎಂದು ಪ್ರತಿಭಟಿಸಿದೆ.
ಕರವೇ ಕಾರ್ಯಕರ್ತರು ಮಾಲ್‌ಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಮಾಲ್ ಆಫ್ ಏಷ್ಯಾವನ್ನು ಡಿಸೆಂಬರ್ ೩೧ ರಿಂದ ಜನವರಿ ೧೫ ರವರೆಗೆ ಮುಚ್ಚಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಮಾಲ್ ನಿರ್ಮಾಣದಿಂದ ಸಂಚಾರಕ್ಕೆ ಅನಾನುಕೂಲವಾಗಿದೆ ಎಂದು ಸಾರ್ವಜನಿಕರೂ ಪ್ರತಿಭಟನೆ ನಡೆಸಿದ್ದರು. ಮಾಲ್ ಪ್ರದೇಶದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ನೀಡುತ್ತಿಲ್ಲ. ವಿಮಾನ ನಿಲ್ದಾಣಕ್ಕೆ ವಾಹನಗಳು ಮತ್ತು ಆಂಬ್ಯುಲೆನ್ಸ್‌ಗಳಿಗೆ ಹೋಗಲು ಕಷ್ಟವಾಗುತ್ತದೆ ಎಂದು ಮಾಲ್ ವಿರುದ್ಧ ದೂರುಗಳು ದಾಖಲಾಗಿವೆ. ಇದೀಗ ಮಾಲ್‌ನಲ್ಲಿ ಸೆಕ್ಷನ್ ೧೪೪ ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮಾಲ್ ಬಳಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!