ಉದಯವಾಹಿನಿ, ಬೆಂಗಳೂರು: ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭದ ಬೆನ್ನಲ್ಲೇ, ಮದ್ಯಪ್ರಿಯರಿಗೆ ಶಾಕಿಂಗ್ ನ್ಯೂಸ್ ಎನ್ನುವಂತೆ, ನಾಳೆಯಿಂದ ಎಣ್ಣೆ ದರಗಳಲ್ಲಿಯೂ ಭಾರಿ ಹೆಚ್ಚಳವಾಗಲಿದೆ. ಈ ಮೂಲಕ ಹೊಸ ವರ್ಷಕ್ಕೆ ಮದ್ಯಪ್ರಿಯರಿಗೆ ಬಿಗ್ ಶಾಕ್ ಸಿಗೋದಂತೂ ಗ್ಯಾರಂಟಿಯಾಗಿದೆ.ಒಂದೆಡೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾದ್ರೇ, ಇದೇ ಮಾದರಿಯಲ್ಲಿ ಜನವರಿ.1ರಿಂದ ಜಾರಿಗೆ ಬರುವಂತೆ ಮದ್ಯದ ದರ ಕೂಡ ಭಾರಿ ಹೆಚ್ಚಳವಾಗಲಿದೆ.
ಕಳೆದ ಬಜೆಟ್ ನಲ್ಲಿ ಮದ್ಯದ ಬೆಲೆಯನ್ನು ಏರಿಕೆ ಮಾಡಲಾಗಿತ್ತು. ಅದರಂತೆ ಜುಲೈ.1ರಿಂದಲೇ ದರ ಹೆಚ್ಚಳವಾಗಿತ್ತು. ಆ ಬಳಿಕ ಕಂಪನಿಗಳು ಉತ್ಪಾದನಾ ವೆಚ್ಚ ಸೇರಿದಂತೆ ವಿವಿಧ ಕಾರಣಗಳಿಂದಾಗಿ ದರ ಹೆಚ್ಚಳ ಮಾಡೋದಕ್ಕೆ ಸರ್ಕಾರಕ್ಕೆ ಪತ್ರ ಬರೆದಿವೆ ಎನ್ನಲಾಗುತ್ತಿದೆ. ಅದರಲ್ಲಿ ಮದ್ಯದ ದರಗಳನ್ನು ಶೇ.10, 20ರಷ್ಟು ಏರಿಕೆಯ ಮಾಡೋದಾಗಿ ತಿಳಿಸಿವೆ ಎನ್ನಲಾಗಿದೆ. ಅದರಂತೆ ಈ ದರಗಳು ಜನವರಿ.1ರ ಜಾರಿಗೆ ಬರಲಿದ್ದಾವೆ.ಅಂದಹಾಗೇ ನಾಳೆಯಿಂದ 180 ಎಂ.ಎಲ್ ಓಟಿ ಬೆಲೆ ರೂ.100 ಇದ್ದದ್ದು ರೂ.123ರಷ್ಟು ಆಗಲಿದೆ. 180 ಎಂ.ಎಲ್ ಬಿಪಿ ರೂ.123ರಿಂದ 159ಕ್ಕೆ ಏರಿಕೆಯಾಗಲಿದೆ. 8PM ಮದ್ಯದ 180 ಎಂಎಲ್ ದರವು 100 ರಿಂದ 123ಕ್ಕೆ ಏರಿಕೆಯಾಗಲಿದೆ. ಇದು ಕಂಪನಿಗಳ ಉತ್ಪಾದನಾ ವೆಚ್ಚ, ಸರಕು ಸಾಗಾಣೆ ವೆಚ್ಚ ಏರಿಕೆಯ ಕಾರಣದಿಂದ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!