ಉದಯವಾಹಿನಿ, ಕಲಬುರಗಿ: ‘ಶಾಲೆ ಹಂತದಲ್ಲಿನ ಮಕ್ಕಳಲ್ಲಿನ ಕಲಾ ಪ್ರತಿಭೆಯನ್ನು ಪೆÇ್ರೀತ್ಸಾಹಿಸಿ, ಅವರ ಚಿತ್ರಕಲಾಕೃತಿಗಳಿಗೆ ವೇದಿಕೆ ಕಲ್ಪಿಸಿಕೊಡುತ್ತಿರುವುದು ಶ್ಲಾಘನೀಯ’ ಎಂದು ಹಿರಿಯ ಚಿತ್ರಕಲಾವಿದ ವಿ.ಜಿ. ಅಂದಾನಿ ಹೇಳಿದರು.
ನಗರದ ನೀಲಗಂಗಮ್ಮ ಗುರಪ್ಪ ಅಂದಾನಿ ಶನಿವಾರ ಗ್ಯಾಲರಿಯಲ್ಲಿ ಪೇಠಶಿರೂರ ಪ್ರೌಢಶಾಲೆ, ಇಂಡಿಯಾ ಫೌಂಡೇಷನ್ ಫಾರ್ ದಿ ಆಟ್ರ್ಸ್ ಹಾಗೂ ಕಲಿ-ಕಲಿಸು ಯೋಜನೆಯಡಿ ಆಯೋಜಿಸಿದ್ದ ‘ಪಠ್ಯಗಳಿಗೆ ಸುರಪುರ ಶೈಲಿಯ ಚಿತ್ರಸಂಪುಟ’ ಬಿಡುಗಡೆ ಹಾಗೂ ಚಿತ್ರಕಲಾ ಪ್ರದರ್ಶನದ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ‘ಪೇಠಶಿರೂರನಂತಹ ಸರಕಾರಿ ಶಾಲೆಯ ಮಕ್ಕಳಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡಿಸಿದ ಕಲಾ ಶಿಕ್ಷಕರ ಶ್ರಮ ಮೆಚ್ಚುವಂತಹದ್ದು. ವಿದ್ಯಾರ್ಥಿಗಳು ಸಹ ಪಠ್ಯದಲ್ಲಿ ತಾವು ಓದಿದ್ದು, ನೋಡಿದನ್ನು ಸುರಪುರ ಶೈಲಿಯಲ್ಲಿ ಚೆನ್ನಾಗಿ ಚಿತ್ರಿಸಿದ್ದಾರೆ. ಅವರ ಕಲೆಗೆ ಇನ್ನಷ್ಟು ಪೆÇ್ರೀತ್ಸಾಹ ಸಿಗಬೇಕಿದೆ’ ಎಂದರು.ಕಲಬುರಗಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ವಿ.ಜಿ.ಅಂದಾನಿ ಅವರು ‘ಸುರಪುರ ಶೈಲಿಯ ಚಿತ್ರಸಂಪುಟ’ವನ್ನು ಬಿಡುಗಡೆ ಮಾಡಿದರು. ಚಿತ್ರಕಲಾವಿದರು ಪಾಲ್ಗೊಂಡಿದ್ದರು.
