ಉದಯವಾಹಿನಿ, ಬೀದರ್: ತಾಲ್ಲೂಕಿನ ಪೆಮಾ ತಾಂಡಾ ಸಮೀಪದ ಅಲಿಯಂಬರ್ ಸೇತುವೆ ಬಳಿ ನವೆಂಬರ್‍ನಲ್ಲಿ ನಡೆದಿದ್ದ ಕೊಲೆ ಪ್ರಕರಣವನ್ನು ಬೀದರ್ ಜಿಲ್ಲಾ ಪೆÇಲೀಸರು ಭೇದಿಸಿ, ಐದು ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಮೇಲ್ನೋಟಕ್ಕೆ ಅಪಘಾತದಂತೆ ಕಂಡು ಬಂದಿದ್ದ ಪ್ರಕರಣದ ಒಳ ಹೊರಗನ್ನು ಸೂಕ್ಷ್ಮವಾಗಿ ತನಿಖೆ ನಡೆಸಿ, ಅಗತ್ಯ ಸಾಕ್ಷ್ಯಗಳನ್ನು ಕಲೆ ಹಾಕಿ ಕೃತ್ಯ ಎಸಗಿದ ಐದೂ ಜನ ಆರೋಪಿಗಳನ್ನು ಒಂದು ತಿಂಗಳು 20 ದಿನಗಳಲ್ಲಿ ಬಂಧಿಸಿದ್ದಾರೆ.
ಪರ ಪುರುಷನೊಂದಿಗೆ ಅನೈತಿಕ ಸಂಬಂಧ ಹೊಂದಿರುವುದರ ಬಗ್ಗೆ ಪತಿಗೆ ಸಂಶಯ ಬಂದದ್ದರಿಂದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ, ಸುಪಾರಿ ಕೊಟ್ಟು ಕೊಲೆ ಮಾಡಿಸಿರುವುದು ತನಿಖೆಯಿಂದ ಬಯಲಾಗಿದೆ. ಕೊಲೆಗೆ ಸುಪಾರಿ ನೀಡಿದ ಹೊನ್ನಿಕೇರಿಯ ರವಿ ಪಾಟೀಲ್, ಮೈಸೂರಿನ ಚೈತ್ರಾ, ಆಕಾಶ, ಈತನ ತಂದೆ ವೆಂಕಟ ಗಿರಿಮಾಜೆ, ಕೊಲೆ ಸಂಚಿಗೆ ನೆರವಾದ ಸಿಕಂದರ್ ಷಾ ಎಂಬಾತನನ್ನು ಪೆÇಲೀಸರು ಬಂಧಿಸಿದ್ದಾರೆ.ಕೃತ್ಯವನ್ನು ತಾವೇ ಎಸಗಿರುವುದಾಗಿ ಆರೋಪಿಗಳು ತಪೆÇ್ಪಪ್ಪಿಕೊಂಡಿದ್ದಾರೆ. ಇನ್ನು, ತನಿಖೆ ಪ್ರಗತಿಯಲ್ಲಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
