ಉದಯವಾಹಿನಿ, ಅಥಣಿ : ಎರಡು ಪ್ರತ್ಯೇಕ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಗಳನ್ನು ಆಸ್ಪತ್ರೆಗೆ ಸಾಗಿಸಿದ 108 ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ಇಎಂಟಿ. ನಿರ್ಮಲಾ ಬನಸೋಡೆ ಹಾಗೂ ಡ್ರೈವರ್ ವಿಜಯಕುಮಾರ ಇವರು ಒಬ್ಬ ಮೃತ ಪುರುಷನ ಹತ್ತಿರ ಇದ್ದ 30.500 ರೂಪಾಯಿಯನ್ನು ಹಾಗೂ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಅಜ್ಜಿ ಅಥಣಿ ಬಸ್ ನಿಲ್ದಾಣದಲ್ಲಿ ನಿದನ ಹೊಂದಿದರು ಆ ಅಜ್ಜಿಯನ್ನು ಸರಕಾರಿ ಆಸ್ಪತ್ರೆಗೆ ಸಾಗಿಸಿ ಅವಳ ಮೈ ಮೇಲಿದ್ದ ಬಂಗಾರದ ಒಡವೆ ಇಬ್ಬರ ಮೃತರ ಸಂಬಂಂಧಿಕರು ಬರುವವರೆಗೆ ಕಾದು ಅವರ ಸಂಬಂಧಿಕರು ಬಂದ ಮೇಲೆ ಮೃತರ ಹತ್ತಿರ ಇದ್ದ ಒಡವೆ ಮತ್ತು ಹಣವನ್ನು ವಾಪಸ್ ಕೊಡುವುದರ ಮೂಲಕ ಈ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ಈ ವೇಳೆ ಮೃತರ ಸಂಬಂಧಿಕರು ಮಾತನಾಡಿ ಇಂದಿನ ದಿನಮಾನಗಳಲ್ಲಿ ಇಂತಹ ಪ್ರಾಮಾಣಿಕ ಸಿಬ್ಬಂದಿಗಳು ಸಿಗುವುದು ತುಂಬಾ ಅಪರೂಪ ಎಂದು 108 ಸಿಬ್ಬಂದಿಗಳಾದ ಇಎಂಟಿ ನಿರ್ಮಲಾ ಬನಸೋಡೆ ಹಾಗೂ ಅಂಬ್ಯುಲೆನ್ಸ್ ಡ್ರೈವರ್ ವಿಜಯಕುಮಾರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!