ಉದಯವಾಹಿನಿ, ಆನೇಕಲ್: ತಾವು ಕೆಲಸಕ್ಕಿದ್ದ ಕಂಪೆನಿಗೆ ವಂಚಿಸಿ ನೈಕಿ ಕಂಪನಿಯ ಶೂಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಅಸ್ಸಾಂ ಮೂಲದ ಮೂವರು ಆರೋಪಿಗಳನ್ನು ಅತ್ತಿಬೆಲೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಕೋಟಿ ಹತ್ತು ಲಕ್ಷ ರೂಪಾಯಿ ಮೌಲ್ಯದ ನೈಕಿ ಕಂಪನಿಯ ಶೂಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ಈಚರ್ ಕಂಟೈನರ್ ಕ್ಯಾಂಟರ್‍ನ್ನು ಮೌಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಾದ ಸುಭಾನ್ ಪಾಷ, ಮನ್‍ಸೂರ್ ಅಲಿ, ಶಾಹಿದುಲ್ ರೆಹಮಾನ್‍ನನ್ನು ಬಂಧಿಸಲಾಗಿದ್ದು, ಉಳಿದ ಇಬ್ಬರ ಆರೋಪಿಗಳ ಪತ್ತೆಗೆ ಶೋಧ ನಡೆಸಲಾಗಿದೆ.
ಅಸ್ಸಾಂ ಮೂಲದವರಾದ ಈ ಮೂವರು ಆರೋಪಿಗಳು ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡಿದ್ದು, ಕೆಲಸಕ್ಕಿದ್ದ ಕಂಪೆನಿಯಲ್ಲೇ ಮಾಲೀಕರನ್ನು ನಂಬಿಸಿ, ವಂಚಿಸಿ ಇದೀಗ ಖಾಕಿ ಬಲೆಗೆ ಬಿದ್ದಿದ್ದಾನೆ. ಅತ್ತಿಬೆಲೆ ಪೋಲಿಸ್ ಠಾಣೆ ವ್ಯಾಪ್ತಿಯ ಶೆಟ್ಟಹಳ್ಳಿ ಗ್ರಾಮದ ಬಳಿಯಿರುವ ನೈಕಿ ಗೋಡೌನ್‍ನಿಂದ ಅನುಗೊಂಡನಹಳ್ಳಿ ಗ್ರಾಮದ ಸಮೀಪದಲ್ಲಿರುವ ಮಿಂತ್ರ ಗೋಡೋನ್‍ಗೆ ಈಚರ್ ಕಂಟೈನರ್ ಕ್ಯಾಂಟರ್‍ನಲ್ಲಿ ನೈಕಿ ಕಂಪನಿಗೆ ಸೇರಿದ ಶೂಗಳನ್ನು ಸಾಗಿಸುತ್ತಿದ್ದರು.

 

Leave a Reply

Your email address will not be published. Required fields are marked *

error: Content is protected !!