ಉದಯವಾಹಿನಿ, ಮೈಸೂರು: ದೇಶದ ಬಗೆಗೆ ಅಭಿಮಾನ ಹೆಚ್ಚಿಸುವ ರಾಷ್ಟ್ರೀಯ ಹಬ್ಬಗಳ ಘನತೆ ಹೆಚ್ಚಾಗುವಂತೆ ಶ್ರದ್ಧಾ ಭಕ್ತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸೋಣ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಇಂದು ನಡೆದ ಗಣರಾಜ್ಯೋತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜನವರಿ 26 ರಂದು ಗಣರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿಸಲು ಸಂವಿಧಾನದ ಬಗೆಗೆ, ಸಂವಿಧಾನ ಪೀಠಿಕೆ ಬಗೆಗೆ, ವಿದ್ಯಾರ್ಥಿ, ಯುವಜನರು ಹಾಗೂ ಸಾರ್ವಜನಿಕರಲ್ಲಿ ಅರಿವು ಹಾಗೂ ಜಾಗೃತಿ ಮೂಡಿಸುವ ಮತ್ತು ರಾಷ್ಟ್ರ ಕಟ್ಟುವ ಸಂಕಲ್ಪ ಎಲ್ಲರಲ್ಲೂ ಬೆಳೆಯುವಂತೆ ಗಣರಾಜ್ಯೋತ್ಸವ ಆಚರಣೆಯಾಗಲಿ ಎಂದರು.
ಅoದು ಬೆಳಿಗ್ಗೆ 9 ಗಂಟೆಗೆ ಸನ್ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಬನ್ನಿಮಂಟಪ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲಿದ್ದು ಮಹಾನಗರ ಪಾಲಿಕೆಯವರು ವೇದಿಕೆ, ಸ್ವಚ್ಚತೆ, ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ನೋಡಿಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿದ್ದು, ಈ ಬಾರಿ ಅಂಧಶಾಲಾ ಮಕ್ಕಳಿಂದ ಪೆರೇಡ್ ಮಾಡಿಸಿ ಎಂದರು.
ಸoಜೆಯ ಕಾರ್ಯಕ್ರಮಗಳು ಕಲಾಮಂದಿರದಲ್ಲಿ ನಡೆಯಲಿದ್ದು, ಈ ಬಾರಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ಹಾಗೂ ಸರ್ಕಾರಿ ನೌಕರರ ಸಂಘದಿoದ ಕಾರ್ಯಕ್ರಮ ಇರಲಿವೆ ಎಂದು ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸುದರ್ಶನ್ ಹೇಳಿದರು.

Leave a Reply

Your email address will not be published. Required fields are marked *

error: Content is protected !!