
ಉದಯವಾಹಿನಿ, ಚಾಮರಾಜನಗರ: ಬರೋಬ್ಬರಿ 10 ಆನೆಗಳ ಹಿಂಡು ಬೀಡು ಬಿಟ್ಟು ಬೆಳೆನಾಶದ ಆತಂಕಕ್ಕೆ ಕಾರಣವಾಗಿರು ವಘಟನೆ ಚಾಮರಾಜನಗರ ಗಡಿಭಾಗವಾದ ತಮಿಳುನಾಡಿನ ಅರಳವಾಡಿಯಲ್ಲಿ ನಡೆದಿದೆ.
ಕರ್ನಾಟಕ ಮತ್ತು ತಮಿಳುನಾಡಿನ ಗಡಿ ಪ್ರದೇಶ ಇದಾಗಿದ್ದು ಎರಡೂ ರಾಜ್ಯಗಳ ಗಡಿಗ್ರಾಮಗಳ ರೈತರು ಕೃಷಿಯನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇಂದು ಮಧ್ಯಾಹ್ನಕಾಡಿನಿಂದ ಆಹಾರ ಅರಸಿ ನಾಡಿನತ್ತ ಬಂದಿರುವ ಕಾಡಾನೆ ಹಿಂಡು ಅರಳವಾಡಿ ಬಳಿ ಬೀಡು ಬಿಟ್ಟಿದ್ದುಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ ಶುರುವಾಗಿದೆ. ತಮಿಳುನಾಡು ಭಾಗದಲ್ಲಿರುವ ಸದ್ಯ ಆನೆಗಳ ಹಿಂಡು ಅಲ್ಲಿಂದ ಅರಕಲವಾಡಿ, ಬಿಸಲವಾಡಿ, ಯಾನಗಳ್ಳಿ, ಬಂಡಿಗೌಡನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದೆ. ಅರಣ್ಯ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡುಕಾಡಿಗೆ ಆನೆಗಳನ್ನು ಓಡಿಸಬೇಕೆಂದು ರೈತರು ಒತ್ತಾಯಿಸಿದ್ದಾರೆ.
