ಉದಯವಾಹಿನಿ, ಬೆಂಗಳೂರು: ರಾಜ್ಯ ಶಿಕ್ಷಣ ನೀತಿ ಜಾರಿ ಸಂಬಂಧ ನಾಲ್ಕು ದಿನಗಳ ಸಭೆ ನಡೆಯುತ್ತಿದ್ದು ಸಭೆಯ ಮೊದಲ ದಿನ ರಾಜ್ಯದಲ್ಲಿ ೧೮೮೨ರಿಂದ ೨೦೨೦ರವರೆಗೆ ನಡೆದ ಉನ್ನತ ಶಿಕ್ಷಣ ಹಾಗೂ ಪದವಿ ಮಾಹಿತಿ ಪರಾಮರ್ಶೆ ನಡೆಸಲಾಯಿತು.
ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ ರಾಜ್ಯ ವ್ಯಾಪಿ ನಡೆಸಿದ ಎನ್‌ಇಪಿ -೨೦೨೦ರ ಸಮಸ್ಯೆಗಳು ಹಾಗೂ ಗೊಂದಲದ ಬಗ್ಗೆ ಮಾದರಿ ಸಮೀಕ್ಷೆಯ ವಿಶ್ಲೇಷಣಾ ವರದಿ ಹಾಗೂ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ದೇಶದ ಹಾಗೂ ರಾಜ್ಯದ ಹಲವಾರು ಶಿಕ್ಷಣ ತಜ್ಞರು, ಪ್ರಾಧ್ಯಾಪಕರು, ಸಾಹಿತಿಗಳು, ಶಿಕ್ಷಣ ಪ್ರೇಮಿ ಜನತೆಯನ್ನೊಳಗೊಂಡು ರೂಪಿಸಿದ ಕರ್ನಾಟಕದ ಜನಪರ ಶಿಕ್ಷಣ ನೀತಿಯ ಕರಡನ್ನು ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಾದ ಪ್ರೊ.ಸುಖದೇವ್ ಥೋರಟ್ ಅವರಿಗೆ ನಿಯೋಗದ ಮೂಲಕ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯು ನೀಡಿದೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಪ್ರೊ. ತರುಣ್ ಕಾಂತಿ ನಸ್ಕರ್, ರಾಜ್ಯ ಅಧ್ಯಕ್ಷರಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ರಾಜ್ಯ ಉಪಾಧ್ಯಕ್ಷರಾದ ಶ್ರೀ ವಿ.ಎನ್. ರಾಜಶೇಖರ್ , ರಾಜ್ಯ ಕಾರ್ಯದರ್ಶಿ ಎಸ್ ಜಿ ಮಹೇಶ್ ಸಲಹೆಗಾರರು ಹಾಗೂ ವಿಜ್ಞಾನಿಗಳಾದ ಆರ್. ಎಲ್. ಮೌರ್ಯನ್ ಮತ್ತು ಪ್ರೊ. ರಮೇಶ್ ಲಂಡನಕರ್ ಭಾರತ ಶಿಕ್ಷಣ ಉಳಿಸಿ ಸಮಿತಿ ನಡೆಸಿದ ಸಮೀಕ್ಷೆ ಹಾಗೂ ಜನಪರ ನೀತಿಯ ಉಪಸ್ಥಿತರಿದ್ದರು.
ಜನಪರ ಶಿಕ್ಷಣ ನೀತಿಯ ಕರಡನ್ನು ಸ್ವೀಕರಿಸಿ ಅದರ ಬಗ್ಗೆ ಪ್ರೊ.ಸುಖದೇವ್ ಥೋರಟ್ ರವರು ಶ್ಲಾಘಿಸಿದ್ದಾರೆ .ಕರ್ನಾಟಕ ರಾಜ್ಯ ಶಿಕ್ಷಣ ನೀತಿ ಆಯೋಗವು ಈ ಎಲ್ಲಾ ವರದಿಗಳನ್ನು ಪರಿಗಣಿಸುತ್ತದೆ ಎಂದು ಹೇಳಿದ್ದಾರೆ.
