ಉದಯವಾಹಿನಿ ಬಳ್ಳಾರಿ: ನೆಹರು ಯುವ ಕೇಂದ್ರ ಹಾಗೂ ತಾಲೂಕಿನ ಸಂಗನಕಲ್ಲಿನ ವೀಣಾ ಶ್ರೀ ಮಹಿಳಾ ಕಲಾ ಸಂಘ ಇವರ ಹಯೋಗದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 161ನೇ ಜಯಂತಿ ನಿಮಿತ್ತ ರಾಷ್ಟ್ರೀಯ ಯುವ ದಿನ ಯುವ ಸಪ್ತಾಹ ಕಾರ್ಯಕ್ರಮ ನಗರದ ಸರ್ಕಾರಿ ಬಾಲಕರ ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿ ಇಂದು ನಡೆಯಿತು.
ಸ್ವಾಮಿ ವಿವೇಕಾನಂದರ ಕುರಿತು ವಿಶೇಷ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಜನಪದ ಕಲಾವಿದ ಹೆಚ್ ಸುಂಕಪ್ಪ ಉದ್ಘಾಟಿಸಿ, ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಗೆ ಸ್ವಾಮಿ ವಿವೇಕಾನಂದರ ಹೇಗೆ ಆದರ್ಶ ಪ್ರಾಯರಾದರು. ಅದರಂತೆ, ನಮ್ಮ ಯುವಕರು ಕೂಡ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕೆಂದರು.
ಯುವಕರಲ್ಲಿ ಇಂಥ ಮಹನೀಯರ ಜಾಗೃತಿ ಮೂಡಿಸುವ ಕೆಲಸ ನೆಹರು ಯುವ ಕೇಂದ್ರ ಬಳ್ಳಾರಿ ಮಾಡುತ್ತಿದ್ದು ಅತ್ಯಂತ ಸಂತಸದ ವಿಷಯವಾಗಿದ್ದು ಇದಕ್ಕೆ ಎಲ್ಲರ ಸಹಕಾರ ಕೂಡ ಮುಖ್ಯ ಎಂದರು.
ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಓಂಕಾರವರು ಪ್ರಥಮ, ಚಿದಾನಂದ ಸ್ಥಾನ ವಿಶ್ವನಾಥ್ ತೃತೀಯ ಸ್ಥಾನ ಪಡೆಯುವ ಮೂಲಕ ವಿವೇಕಾನಂದರ ವಿಚಾರಧಾರೆಗಳನ್ನು ತಮ್ಮ ಭಾಷಣ ಮೂಲಕ ಸಭಿಕರನ್ನು ಆಕರ್ಷಿಸುವಂತೆ ಮಾಡಿದರು. ವಿಜೇತ ಯುವಕರಿಗೆ ವಿವೇಕಾನಂದರ ಭಾವಚಿತ್ರ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.
ಮುಖ್ಯ ಅತಿಥಿಗ ಸಂಗೀತ ಕಲಾವಿದ ವೀರೇಶ್ ದಳವಾಯಿ, ಪ್ರಕಾಶ್, ಎರಿಸ್ವಾಮಿ, ನಾಗರಾಜ, ರವಿಕುಮಾರ್, ಲಕ್ಷ್ಮಣ ಮತ್ತು ನೆಹರು ಯುವ ಕೇಂದ್ರದ ಅಮರೇಶ್ ಉಪಸ್ಥಿತರಿದ್ದರು.
