ಉದಯವಾಹಿನಿ, ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಮಂಜು ಆವರಿಸಿದ ಹಿನ್ನೆಲೆಯಲ್ಲಿ ವಿಮಾನ ಹಾರಾಟದಲ್ಲಿ ಭಾರಿ ವ್ಯತ್ಯಯವಾಗಿದೆ.
ವಿಮಾನಗಳು ಕಳೆದ ಎರಡು ಗಂಟೆಗೂ ಅಧಿಕ ಕಾಲ ಟೇಕಾಫ್ ಆಗಿಲ್ಲ. ಸುಮಾರು ೩೪ ವಿಮಾನಗಳು ಟೇಕಾಫ್ ಆಗದೆ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಯಿತು.
ದಟ್ಟ ಮಂಜಿನಿಂದ ರನ್ ವೇ ಕಾಣದ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತವಾಗಿದೆ. ಹೀಗಾಗಿ ಪ್ರಯಾಣಿಕರು ವಿಮಾನಗಳಲ್ಲೆ ಕುಳಿತ ಕಾಲಹರಣ ಮಾಡಿದ್ದು,೯ ಗಂಟೆ ನಂತರ ವಿಮಾನಗಳು ಟೇಕ್ ಆಪ್‌ಗೆ ಸಿದ್ದವಾಗಿವೆ.
ಪ್ರತಿ ವರ್ಷ ಚಳಿಗಾಲದಲ್ಲಿ ಮುಂಜಾನೆ ಈ ಸಮಸ್ಯೆ ತಲೆದೂರುತ್ತದೆ. ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿ ಪ್ರಯಾಣಿಕರು ಸಮಸ್ಯೆಗೆ ಸಿಲುಕುತ್ತಿದ್ದಾರೆ. ಚಳಿಗಾಲ ಮುಗಿಯುವವರೆಗೂ ಕನಿಷ್ಠ ಮೂರು ತಿಂಗಳು ಆಗಾಗ ಈ ಸಮಸ್ಯೆ ತಲೆದೋರುವ ಸಾಧ್ಯತೆ ಇದೆ.
