ಉದಯವಾಹಿನಿ, ದಾವಣಗೆರೆ : ಸಂಸದ ಡಾ. ಜಿ.ಎಂ. ಸಿದ್ದೇಶ್ವರ ಅವರು ಕಳೆದ ೮-೧೦ ವರ್ಷದಿಂದ ೫೦೦ ಕೋಟಿಗೂ ಅಧಿಕ ಹಣದ ಹವಾಲ ಹಗರಣ ನಡೆಸಿದ್ದಾರೆ ಎಂಬ ಆರೋಪದ ಬಗ್ಗೆ ಇಡಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ದಾವಣಗೆರೆಯಲ್ಲಿಂದು ಬೃಹತ್ ಪ್ರತಿಭಟನೆ ನಡೆಸಿದರು.ಅಂಬೇಡ್ಕರ್ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಹದಡಿ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಈ ವೇಳೆ ಮಾತನಾಡಿದ. ಕಾಂಗ್ರೆಸ್ ಮುಖಂಡರು ಸಂಸದ ಸಿದ್ದೇಶ್ವರ್ ಹಲವಾರು ವರ್ಷಗಳಿಂದ ಹವಾಲ ಹಗರಣ ನಡೆಸುತ್ತಿದ್ದಾರೆ. ಮೂವತ್ತು ಪೈಸೆ ಕಮಿಷನ್ ಗಾಗಿ ಕಳೆದ ಹಲವಾರು ವರ್ಷದಿಂದ ನನ್ನ ಕಾರಿನಲ್ಲೇ ಹಣ ಸಾಗಿಸುತ್ತಿದ್ದೆ ಎಂಬುದಾಗಿ ಚಾಲಕ ಸ್ವಾಮಿ ಮತ್ತು ಅನುಪಮ ಎಂಬುವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಶೆಟ್ಟಿ, ಎಸ್. ಮಲ್ಲಿಕಾರ್ಜುನ್, ಅನಿತಾಬಾಯಿ, ನಗರ ಪಾಲಿಕೆ ಸದಸ್ಯರಾದ ಕೆ. ಚಮನ್ ಸಾಬ್, ಅಬ್ದುಲ್ ಲತೀಫ್, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಎಲ್.ಎಚ್. ಸಾಗರ್, ಕೋಳಿ ಇಬ್ರಾಹಿಂ, ಅಲ್ತಾಫ್ ಹುಸೇನ್, ಕೆ.ಜಿ. ಶಿವಕುಮಾರ್, ಅಯೂಬ್ ಪೈಲ್ವಾನ್, ಕವಿತಾ ಚಂದ್ರಶೇಖರ, ಶಿವರತನ್, ಜಯಕುಮಾರ್, ಅನೀಸ್ ಪಾಷ, ನಂಜಾನಾಯ್ಕ, ಅಲಿ ರಹಮತ್, ಸುನೀತಾ ಭೀಮಣ್ಣ ಇತರರು ಇದ್ದರು.

Leave a Reply

Your email address will not be published. Required fields are marked *

error: Content is protected !!