ಉದಯವಾಹಿನಿ, ಬೆಂಗಳೂರು : ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದು ಡಂಜೋ ಡೆಲಿವರಿ ಬಾಯ್ ಮೃತಪಟ್ಟಿರುವ ದುರ್ಘಟನೆ ಮೈಸೂರು ರೋಡ್ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ನಡೆದಿದೆ. ಡಂಜೋ ಡೆಲಿವರ್ ಬಾಯ್‌ನನ್ನು ಬಸವರಾಜು ಮೃತಪಟ್ಟವರು. ಮೈಸೂರು ರಸ್ತೆಯ ಸ್ಯಾಟ್‌ಲೈಟ್ ಬಸ್ ನಿಲ್ದಾಣದ ಬಳಿ ಇವರ ಬೈಕ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿದೆ. ರಾತ್ರಿ ಒಂದು ಗಂಟೆಗೆ ಮೈಸೂರು ರೋಡ್ ಕಡೆಗೆ ಡೆಲಿವರಿ ಕೊಡಲೆಂದು ಬೈಕ್‌ನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಬಸ್ ಅಪ್ಪಳಿಸಿದೆ. ಡಿಕ್ಕಿ ಹೊಡೆದ ಬಳಿಕ ಬಸ್ ಮುಂಭಾಗದ ಎಡಗಡೆಯ ಚಕ್ರಕ್ಕೆ ಬಸವರಾಜು ಸಿಲುಕಿದ್ದರು. ಈ ವೇಳೆ ಬಸ್ ತಲೆಯ ಮೇಲೆ ಹರಿದ ಪರಿಣಾಮ ಬಸವರಾಜ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮೃತ ಡಂಜೊ ಡೆಲಿವರಿ ಬಾಯ್ ಹೆಲ್ಮೆಟ್ ದರಿಸಿದ್ದರೂ ಸಾವಿಗೀಡಾಗಿದ್ದಾರೆ.ಬಸ್ ಚಾಲಕನ ನಿರ್ಲಕ್ಷ್ಯದ ಚಾಲನೆಯ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ಸ್ಥಳದಿಂದ ಬಸ್ ಚಾಲಕ ನಾಪತ್ತೆಯಾಗಿದ್ದಾನೆ. ಸ್ಥಳಕ್ಕೆ ಬ್ಯಾಟರಾಯನಪುರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
