ಉದಯವಾಹಿನಿ, ಚಿಕ್ಕಬಳ್ಳಾಪುರ :ನಮ್ಮ ಸುತ್ತ ಮುತ್ತ ಜನರು ಹೇಗೆಲ್ಲಾ ಇರ್ತಾರೆ ಎಂದು ಗಮಿನಿಸಿದರೆ ಕೆಲವು ಬಾರಿ ನಗು ಬರುತ್ತದೆ. ಇನ್ನು ಕೆಲವರ ನಡೆವಳಿಕೆಗಳು ನೋಡುಗರಿಗೆ ಹಾಸ್ಯಾಸ್ಪದವಾಗಿ ನಗೆಪಾಟಲಿಗೆ ಕಾರಣವಾಗುತ್ತದೆ. ಇನ್ನು ಕೆಲವು ಪಾನಮತ್ತ ಜೀವಗಳು ಮಾಡುವ ತರ್ಲೆಗಳು ವಿಚಿತ್ರವೆನಿಸುತ್ತದೆ. ಹಾಗೇ ಗುರುವಾರ ಮುಂಜಾನೆ ಚಿಕ್ಕಬಳ್ಳಾಪುರ ನಗರದಲ್ಲೊಂದು ಘಟನೆ ನಡೆದಿದೆ.
ನಗರದ ವಾಪಸಂದ್ರದಲ್ಲಿ ೩೫ ವರ್ಷದ ನಾಗರಾಜ್ ಎಂಬ ವ್ಯಕ್ತಿಯೊಬ್ಬ ನಲವತ್ತು ಅಡಿ ಎತ್ತರದ ವಿದ್ಯುತ್ ಟ್ರಾನ್ಸ್ ಪಾರ್ಮರ್ ಕಂಬವನ್ನು ಹತ್ತಿ ಕುಳಿತಿದ್ದಾನೆ.
ಗುರುವಾರ ಮಂಜಾನೆ ಸುಮಾರು೧ ಗಂಟೆಸಮಯದಲ್ಲಿ ರಾತ್ರಿ ಗಸ್ತಿನಲ್ಲಿದ್ದ ನಗರ ಪೋಲಿಸ್ ಠಾಣೆಯ ಪಿಎಸ್‌ಐ ಹೆಚ್. ನಂಜುಂಡಯ್ಯರವರಿಗೆ ನಗರದ ವಾಪಸಂದ್ರದ ಕೇಕ್ ಲ್ಯಾಂಡ್ ಬೇಕರಿ ಬಳಿ ಅಪರಿಚಿತ ವ್ಯಕ್ತಿಯೊಬ್ಬ ನಲವತ್ತು ಅಡಿ ಎತ್ತರದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬ ಹತ್ತುತ್ತಿದ್ದಾನೆ ಎಂದು ಪೋನ್ ಮೂಲಕ ಮಾಹಿತಿ ಬರುತ್ತದೆ. ಕೂಡಲೇ ಕಾರ್ಯ ಪ್ರವೃತ್ತರಾದ ಪಿಎಸ್‌ಐ ನಂಜುಂಡಯ್ಯ ತಮ್ಮ ಸಮಯ ಪ್ರಜ್ಞೆಯಿಂದ ಬೆಸ್ಕಾಂ ಅಧಿಕಾರಿಗಳಿಗೆ ಪೋನ್ ಮೂಲಕ ಮಾಹಿತಿ ನೀಡಿ ವಿದ್ಯುತ್ ಟ್ರಾನ್ಸ್ ಪಾರ್ಮರ್ ನ ವಿದ್ಯುತ್ ಸರಭರಾಜು ನಿಲ್ಲಿಸಿ, ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಸಿಬ್ಬಂಧಿಯೊಂದಿಗೆ ಸ್ಥಳಕ್ಕೆ ಬರುವಷ್ಟರಲ್ಲಿ ಕುಡಿತದ ಅಮಲಿನಲ್ಲಿ ಕಂಬವೇರುತ್ತಿದ್ದ ವ್ಯೆಕ್ತಿ ನಲವತ್ತು ಅಡಿ ಎತ್ತರದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಕಂಬವೇರಿ ಟ್ರಾನ್ಸ್ ಮೇಲೆ ಕುಳಿತು ಬಿಟ್ಟಿದ್ದ.
ಕಂಬವೇರಿದ್ದ ವ್ಯೆಕ್ತಿಯನ್ನು ಪೋಲಿಸರು,ಅಗ್ನಿಶಾಮಕ ದಳ ಮತ್ತು ಬೆಸ್ಕಾಂ ಸಿಬ್ಬಂಧಿ ಎಷ್ಟೇ ಮನ ವೊಲಿಸಿದರು ಆತ ಕೆಳಕ್ಕಿಳಿಯಲು ಸುತಾರಾಂ ಒಪ್ಪಲಿಲ್ಲಾ. ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ೪-೧೦ ನಿಮಿಷಕ್ಕೆ ಬೆಸ್ಕಾಂ ಹೈಡ್ರಾಲಿಕ್ ಬಕೆಟ್ ಟ್ರಾಲಿಯ ಮೂಲಕ ಪಿಎಸೈ ನಂಜುಂಡಯ್ಯ ಮತ್ತು ಬೆಸ್ಕಾಂ ಮತ್ತು ಅಗ್ನಿಶಾಮಕ ಸಿಬ್ಬಂಧಿ ಸೇರಿ ಕೊನೆಗೂ ಆತನ್ನು ಕೆಳಕ್ಕೆ ಕರೆತರುವಲ್ಲಿ ಯಶಸ್ವಿಯಾದರು.
