ಉದಯವಾಹಿನಿ, ಹೊಸಕೋಟೆ : ಸಕಲ ಜೀವರಾಶಿಗಳಿಗೂ ಅನ್ನ ನೀಡುವ ದೇವರು ನಮ್ಮ ಕೃಷಿಕ ಇವರಿಗೆ ಸಮಾಜಿಕ ಗೌರವ ಸ್ಥಾನಮಾನ ವಿಭಿನ್ನವಾಗಿದೆ ಎಂದು ಅಕ್ಷಯ ಪಾತ್ರ ಪೌಂಡೇಷನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಧರ್ ವೆಂಕಟ್ ಹೇಳಿದರು.
ತಾಲ್ಲೀಕಿನ ಸೂಲಿಬೆಲೆಯಲ್ಲಿ ಅಕ್ಷಯ ಪಾತ್ರ ಪೌಂಡೇಷನ್ ವತಿಯಿಂದ ಹಮ್ಮಿಕೊಂಡಿದ್ದ ಸುಗ್ಗಿ ಹುಗ್ಗಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸಿವು ಮುಕ್ತ ಸಮಾಜ ನಿರ್ಮಾಣ ಮಾಡಲು ನಮ್ಮ ಅಕ್ಷಯ ಪಾತ್ರ ಪೌಂಡೇಷನ್ ಗುಣಮಟ್ಟದ ಆಹಾರ ನೀಡುತ್ತಿದ್ದು ಇದಕ್ಕೆ ಬೆನ್ನಲುಬಾಗಿ ರೈತಾಪಿವರ್ಗದ ಸಹಕಾರ ಸಹ ದೊರೆಯುತ್ತಿದ್ದು ಗುಣಮಟ್ಟದ ತರಕಾರಿ,ಹಣ್ಣು ಹಂಪಲುಗಳು ಸರಬರಾಜು ಮಾಡುವುದರಿಂದ ಸದೃಡ ಆರೋಗ್ಯದಿಂದ ಬಲಿಷ್ಟ ದೇಶ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದರು.
ರೈತ ಪಾಲುದಾರರಲ್ಲಿ ಹೆಚ್ಚಿನವರ ಮಕ್ಕಳು ಅಕ್ಷಯ ಪಾತ್ರ ಪೌಷ್ಟಿಕಾಂಶದ ಊಟವನ್ನು ನೀಡುವ ಶಾಲೆಗಳಲ್ಲಿ ಓದುತ್ತಿದ್ದಾರೆ,ಈ ಸಾಮರಸ್ಯದ ಬಂಧವು ರೈತರಿಗೆ ಬೆಂಬಲ ನೀಡುವುದು ಮಾತ್ರವಲ್ಲದೆ ಅವರ ಮಕ್ಕಳ ಯೋಗಕ್ಷೇಮವನ್ನು ಸಹ ಖಾತ್ರಿಗೊಳಿಸುತ್ತದೆ ಎಂದರು.
