
ಉದಯವಾಹಿನಿ,ಪೀಣ್ಯ ದಾಸರಹಳ್ಳಿ: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ ಜೋಡೋ ಯಾತ್ರೆಯನ್ನು ಯಶಸ್ವಿಗಾಗಿ ಪ್ರತಿಯೊಬ್ಬರು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿ ಸಭೆಗೆ ಸ್ವಾಗತ ಕೋರಿ ಭಾರತ ಜೋಡೋ ಯಾತ್ರೆ ಯಶಸ್ವಿಯಾಗಿ ಮಾಡಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.ಕ್ಷೇತ್ರದ ಹಸರುಘಟ್ಟ ಮುಖ್ಯ ರಸ್ತೆಯಲ್ಲಿ ಇರುವ ಹಿಮಾದ್ರಿ ಹೋಟೆಲ್ ಪಾರ್ಟಿ ಹಾಲಿನಲ್ಲಿ ಕಾಂಗ್ರೆಸ್ ಮುಖಂಡರ ಕಾರ್ಯಕರ್ತರ ಮಹಿಳೆಯರ ನೇತೃತ್ವದಲ್ಲಿ ಭಾರತದ ಯಾತ್ರೆಯ ಪೂರ್ವಭಾವಿ ಸಭೆ ಆಯೋಜಿಸಲಾಗಿತ್ತು.
ಬೆಂಗಳೂರು ಉತ್ತರ ಜಿಲ್ಲೆ ಕಾಂಗ್ರೆಸ್ ಅಧ್ಯಕ್ಷ ರಾಜ್ ಕುಮಾರ್ ಮತ್ತು ದೆಹಲಿ ಕಾಂಗ್ರೆಸ್ ಪ್ರತಿನಿಧಿ ಅಭಿಷೇಕ್ ಹಾಗೂ ಕ್ಷೇತ್ರದ ಮುಖಂಡರ ಸಮ್ಮುಖದಲ್ಲಿ ಸಭೆಗೆ ಚಾಲನೆ ನೀಡಿದರು.ಭಾರತ ಜೋಡೋ ಯಾತ್ರೆಯ ಬಗ್ಗೆ ಎಳೆ ಎಳೆಯಾಗಿ ಮಾರ್ಗದರ್ಶನ ಮತ್ತು ಸಲಹೆ ಅಧ್ಯಕ್ಷ ರಾಜಕುಮಾರ್ ತಿಳಿಸಿದರು.ದೆಹಲಿ ಕಾಂಗ್ರೆಸ್ ಪ್ರತಿನಿಧಿ ಅಭಿಷೇಕ್ ಮಾತನಾಡಿ ದೇಶದ ಪ್ರಧಾನಿ ಮೊಮ್ಮಗ ಒಬ್ಬ ದೇಶದಲ್ಲಿ ಇರುವಂತಹ 130 ಕೋಟಿ ಜನರ ಬದುಕು ಹಸನ ಮಾಡುವ ನಿಟ್ಟಿನಲ್ಲಿ ಮತ್ತು ದೇಶದ ಸುಭದ್ರತೆ ಸಲುವಾಗಿ 3ಸಾವಿರ 50ಕಿಲೋಮಿಟರ್ ಕಾಲ್ನಡಿಗೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಆದರೆ ಅವರ ಜೊತೆಗೆ ನಾವೆಲ್ಲರೂ ಕೈಜೋಡಿಸೋಣ ಎಂದು ಅಭಿಷೇಕ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಕೆಸಿ ಅಶೋಕ್, ಮಾಜಿ ಪಾಲಿಕೆ ಸದಸ್ಯ ನಾಗಭೂಷಣ್, ಅನುಭವ ಜಗದೀಶ್, ಭಾಸ್ಕರಾಚಾರ್ಯ ,ಜಯಂತಿ ಭಗವಾನ್, ಡಾ.ನಾಗಲಕ್ಷ್ಮೀ, ಜೀಜು ವರ್ಗಿಸ್, ರಾಬರ್ಟ್, ವಾರ್ಡ್ ಅಧ್ಯಕ್ಷರು ಬ್ಲಾಕ್ ಅಧ್ಯಕ್ಷ ರು ಕಾಂಗ್ರೆಸ್ ಮುಖಂಡರು ಯುವ ಮುಖಂಡರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.
