
ಉದಯವಾಹಿನಿ,ದೇವದುರ್ಗ: 1932 ರ ಸೆಪ್ಟಂಬರ್ 24ರಂದು ನಡೆದ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಮಧ್ಯೆ ಯರವಾಡ ಜೈಲಿನಲ್ಲಿ ನಡೆದಂತ ಪೂನಾ ಒಪ್ಪಂದದ ವಿಚಾರ ಸಂಕಿರಣ ಹಾಗೂ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಡಾಕ್ಟರ್ ನಾಗಮಹನ್ ದಾಸ್ ವರದಿ ಜಾರಿಗೆ ಒತ್ತಾಯಿಸಿ ಧರಣಿ ನಡೆಸಿರುವ ವಾಲ್ಮೀಕಿ ಗುರುಪೀಠದ ಅಧ್ಯಕ್ಷರಾದ ಶ್ರೀ ಶ್ರೀ ಪ್ರಸನ್ನ ನಂದಾ ಪುರಿ ಮಹಾಸ್ವಾಮಿಗಳ ಹೋರಾಟವನ್ನು ಬೆಂಬಲಿಸಿ ಸಭೆಯನ್ನು ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಜಾತಿಗಳ ಮೀಸಲಾತಿ ಹೆಚ್ಚುವರಿ ಹೋರಾಟ ಕ್ರಿಯೆ ಸಮಿತಿ ವತಿಯಿಂದ ದೇವದುರ್ಗ ಪಟ್ಟಣದಲ್ಲಿ ಸಭೆ ನಡೆಸಲಾಯಿತು, ಈ ಸಂದರ್ಭದಲ್ಲಿ ಪೂನಾ ಮಿಚಾರವಾಗಿ ಹನುಮಂತಪ್ಪ ಮನ್ನಾಪುರಿ, ರಾಮಣ್ಣ ನಾಯಕ ಡಿ ಕರಡಿಗುಡ್ಡ, ಹನುಮಂತಪ್ಪ ಅಕ್ಕರಕಿ, ಪ್ರಭು ದಳಪತಿ ಕಾಕರಕಲ್ ಇವರುಗಳು ಮಾತನಾಡಿದರು,ಈ ಸಂದರ್ಭದಲ್ಲಿ ಬೂದೆಪ್ಪ ಕ್ಯಾದಗಿ, ಹನುಮೇಶ್ ನಾಯಕ, ಭೀಮಣ್ಣ ನಾಯಕ ಗೋಸಲ್, ಪೋಮಣ್ಣ ಪವರ್, ಪರಶುರಾಮ್ ಅಂಜಳ, ಹನುಮಂತರಾಯ ಕರಿಗುಡ್ಡ, ರವಿ ರಾಯಚೂರ್ಕರ್, ಮಲ್ಲೇಶ್ ಕೊತ್ತದೊಡ್ಡಿ, ಶಿವಪ್ಪ ಸೇರಿದಂತೆ ಅನೇಕರು ಭಾಗವಹಿಸಿದ್ದರು,