ಉದಯವಾಹಿನಿ, ಬೆಂಗಳೂರು: ಇಂಡಿಯನ್ ಕೆಮಿಕಲ್ ಸೊಸೈಟಿ ತನ್ನ ಶತಮಾನೋತ್ಸವದ ಈ ಸಂದರ್ಭದಲ್ಲಿ ದೇಶದ ಖ್ಯಾತ ವಿಜ್ಞಾನಿ ಭಾರತರತ್ನ ಪ್ರೊ. ಸಿ.ಎನ್.ಆರ್. ರಾವ್ ಅವರಿಗೆ ಪ್ರತಿಷ್ಠಿತ “ಶತಮಾನದ ರಸಾಯನಶಾಸ್ತ್ರಜ್ಞ ಎಂಬ ಬಿರುದು ನೀಡಿ ಗೌರವಿಸಿದೆ.
ಜನವರಿ ೨೩, ೨೦೨೪ ರಂದು ನಡೆದ ಸಮಾರಂಭದಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಸಂಶೋಧನೆಗಳು, ಗಳಿಸಿರುವ ಅನೇಕ ಅಂತಾರಾಷ್ಟ್ರೀಯ ಪ್ರಶಸ್ತಿಗಳು- ಸನ್ಮಾನಗಳು ಮತ್ತು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ಪ್ರಭಾವಶಾಲಿಯಾದ ಪಾತ್ರಗಳನ್ನು ವಹಿಸುವ ಮೂಲಕ ಅಸಾಧಾರಣ ಸಾಧನೆ ತೋರಿದ್ದನ್ನು ಗುರುತಿಸಿ ಈ ಬಿರುದು ನೀಡಿ ಗೌರವಿಸಲಾಯಿತು.
ಪ್ರೊ. ಸಿ.ಎನ್.ಆರ್. ರಾವ್ ಅವರು ರಸಾಯನಶಾಸ್ತ್ರ ಕ್ಷೇತ್ರದಲ್ಲಿ ತಮ್ಮದೇ ಆದ ಸಂಶೋಧನೆಗಳ ಮೂಲಕ ಖ್ಯಾತನಾಮರಾಗಿದ್ದಾರೆ. ಈ ಕ್ಷೇತ್ರಕ್ಕೆ ತಮ್ಮದೇ ಆದ ಸಮೃದ್ಧ ಕೊಡುಗೆಗಳನ್ನು ನೀಡುವ ಮೂಲಕ ವೈಜ್ಞಾನಿಕ ಲ್ಯಾಂಡ್ ಸ್ಕೇಪ್ ಅನ್ನು ಗಮನಾರ್ಹವಾದ ರೀತಿಯಲ್ಲಿ ರೂಪಿಸಿದ್ದಾರೆ. ಹತ್ತು ಹಲವಾರು ಗೌರವಾನ್ವಿತ ಸಂಸ್ಥೆಗಳಳ್ಲಿ ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ವಹಿಸಿರುವುದು, ಪ್ರಮುಖ ವೈಜ್ಞಾನಿಕ ಸಂಸ್ಥೆಗಳಲ್ಲಿ ಮುಂಚೂಣಿಯಲ್ಲಿ ಸೇವೆ ಸಲ್ಲಿಸುತ್ತಾ ತಮ್ಮ ಕ್ಷೇತ್ರದಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದ್ದಾರೆ. ಇಂಡಿಯನ್ ಕೆಮಿಕಲ್ ಸೊಸೈಟಿ ಮತ್ತು ನ್ಯಾಷನಲ್ ಸೈನ್ಸ್ ಅಧ್ಯಕ್ಷ, ಖ್ಯಾತ ಪ್ರೊಫೆಸರ್ ಹಾಗೂ ಐಸಿಟಿ ಮುಂಬೈನ ವಿಶ್ರಾಂತ ಉಪಕುಲಪತಿಗಳಾದ ಪ್ರೊ.ಜಿ.ಡಿ.ಯಾದವ್, ಜವಾಹರ ಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ ಸೈಂಟಿಫಿಕ್ ರೀಸರ್ಚ್‌ನ ಅಧ್ಯಕ್ಷ ಪ್ರೊ.ಜಿ.ಯು.ಕುಲಕರ್ಣಿ ಮತ್ತು ಎಂಎಂ ಆಕ್ಟೀವ್ ಸೈ-ಟೆಕ್ ಕಮ್ಯುನಿಕೇಷನ್ ಕಾರ್ಯಕಾರಿ ಅಧ್ಯಕ್ಷ ಜಗದೀಶ್ ಪಟಾಂಕರ್ ಸೇರಿದಂತೆ ಮತ್ತಿತರೆ ಗಣ್ಯರು ಉಪಸ್ಥಿತಿಯಲ್ಲಿ ಪ್ರೊ.ಸಿ.ಎನ್.ಆರ್.ರಾವ್ ಅವರಿಗೆ ಬಿರುದು ನೀಡಿ ಅಭಿನಂದಿಸಲಾಯಿತು.

Leave a Reply

Your email address will not be published. Required fields are marked *

error: Content is protected !!