ಉದಯವಾಹಿನಿ, ಬೆಂಗಳೂರು: ಜಯದೇವ ಆಸ್ಪತ್ರೆಯ ನಿರ್ದೇಶಕ ಸ್ಥಾನದಲ್ಲಿ ಮುಂದುವರೆಯಲು ಯಾವುದೇ ರೀತಿಯ ಒತ್ತಡವೂ ಹಾಕಿಲ್ಲ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಆಸ್ಪತ್ರೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದರು.
ಜನವರಿ 31ಕ್ಕೆ ನಿರ್ದೇಶಕರ ಅವ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಸೇವಾವ ಮುಕ್ತಾಯದ ನಿರ್ಧಾರ ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದ್ದು, ಒತ್ತಡ ಹಾಕುವ ಜಾಯಮಾನ ನನಗಿಲ್ಲ. ಆಡಳಿತ ಮಂಡಳಿ ಸಭೆ ನಡೆಯುವಾಗ ನಾನು ಇರಲಿಲ್ಲ. ಸರ್ಕಾರ ನನ್ನ ಅಭಿಪ್ರಾಯ ಕೇಳಿಲ್ಲ ಎಂದು ಹೇಳಿದರು.
ಈಗಾಗಲೇ ಹೊಸ ನಿರ್ದೇಶಕರನ್ನು ಮಾಡುವ ಪ್ರಸ್ತಾವನೆ ಕಾರ್ಯ ನಡೆಯುತ್ತಿದೆ. ಸರ್ಕಾರ ಈಗಾಗಲೇ ಹೊಸ ನಿರ್ದೇಶಕರನ್ನು ನಿಯೋಜಿಸಲು ನಿರ್ಧಾರ ಮಾಡಿದೆ. ಈಗಾಗಲೇ ನಿರ್ದೇಶಕರ ನಿಯೋಜಿಸುವ ಕಾರ್ಯ ಮುಗಿದು ಹೋಗಿದೆ. ಇನ್ನೊಂದು ವಾರದಲ್ಲಿ ಹೊಸ ನಿರ್ದೇಶಕರು ಬರುತ್ತಾರೆ.ಯಾರು ಬರುತ್ತಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಅವರು ತಿಳಿಸಿದರು.
ಸರ್ಕಾರ ಒಂದು ವೇಳೆ ನೀವೆ ಮುಂದುವರೆಯಿರಿ ಎಂದರೆ ಹೇಳಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದರು.ನಿರ್ದೇಶಕನಾಗಿದ್ದಾಗಲೇ ವಿದೇಶ ಪ್ರವಾಸಕ್ಕೆ ಹೋಗಿಲ್ಲ. ಈಗ ವೃತ್ತಿ ಮುಂದುವರೆಸಲು ವಿದೇಶಕ್ಕೆ ಹೋಗುತ್ತಾರೆ ಅನ್ನೋ ಮಾತು ಸತ್ಯಕ್ಕೆ ದೂರವಾಗಿದೆ.
