ಉದಯವಾಹಿನಿ, ಸಂಡೂರು: ತಾಲೂಕಿನ ಜೀವನಾಡಿ ನಾರಿಹಳ್ಳ ಜಲಾಶಯಕ್ಕೆ ಸೇರುವ ಹಳ್ಳಗಳು ಮಾಲಿನ್ಯವಾಗುತ್ತಿದ್ದು ನಾರಿಹಳ್ಳ ತ್ಯಾಜ್ಯ ಸಂಗ್ರಹ ಕೇಂದ್ರವಾಗುತ್ತಿರುವುದು ಕಂಡು ಬರುತ್ತಿದೆ.
ತ್ಯಾಜ್ಯದ ಹೆಚ್ಚಳದಿಂದ ಹಳ್ಳದ ಅಸ್ತಿತ್ವ ನಾಶ- ಮಳೆಗಾಲದಲ್ಲಿ ಅಪಾಯಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಇದಕ್ಕೆ ಜ್ವಲಂತ ಸಾಕ್ಷಿಯಾಗಿ ತಾಲೂಕಿನ ದೌಲತ್‍ಪುರ ರಸ್ತೆಯಲ್ಲಿನ ಕುಂಟಮ್ಮನಹಳ್ಳದ ಪಾತ್ರದಲ್ಲಿ ಕಟ್ಟಿರುವ ಚೆಕ್ ಡ್ಯಾಂಗೆ ಪುರ್ಣ ಪ್ರಮಾಣದಲ್ಲಿ ಹಳೆ ಕಟ್ಟಡಗಳ ತ್ಯಾಜ್ಯವನ್ನು ಸುರಿಯುವುದು ನಿರಂತರವಾಗಿ ಸಾಗಿದೆ, ಈ ಪ್ರಕ್ರಿಯೆ ಮುಂದುವರೆದಲ್ಲಿ ಕುಂಟಮ್ಮನಹಳ್ಳ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಇಲ್ಲಿ ಹಳ್ಳವೇ ಇಲ್ಲ ಎನ್ನುವ ಸ್ಥಿತಿ ಉಂಟಾಗಿ ಮಳೆಗಾಲದಲ್ಲಿ ದೌಲತ್‍ಪುರಕ್ಕೆ ಹೋಗುವುದು, ಹೊಸಪೇಟೆಗೆ ಹೋಗುವ ರಸ್ತೆ ಮದ್ಯೆದಲ್ಲಿ ಪೂರ್ಣಪ್ರಮಾಣದಲ್ಲಿ ನೀರು ನಿಂತು ಸಾರ್ವಜನಿಕರಿಗೆ ವಿಪರೀತವಾಗಿ ಸಮಸ್ಯೆ ಉಂಟಾಗುವುದರಲ್ಲಿ ಅನುಮಾನವೇ ಇಲ್ಲ, ಅಲ್ಲದೆ ಈ ನೀರು ಹೊಸಪೇಟೆ ರಸ್ತೆಯಿಂದ ಕುಂಟಮ್ಮನಹಳ್ಳದ ಮೂಲಕ ನಾರಿಹಳ್ಳ ಸೇರುತ್ತದೆ ನಂತರ ಇಡೀ ನಾರಿಹಳ್ಳ ಮಾಲಿನ್ಯದ ತಾಣವಾಗುತ್ತದೆ.
ಸಂಡೂರು ತಾಲೂಕಿನ ದೌಲತ್‍ಪುರ ಮಾರ್ಗ ಮದ್ಯದ ಚೆಕ್ ಡ್ಯಾಂ ನಿರ್ಮಿಸಲಾಗಿದೆ ಅದರೆ ಇಲ್ಲಿ ಸುರಿಯುವ ತ್ಯಾಜ್ ಇಡೀ ಚೆಕ್ ಡ್ಯಾಂ ಚುಂಇದ್ದು ಮಳೆ ಬಂದರೂ ಸಹ ನೀರು ನಿಲ್ಲದಂತಹ ದುಸ್ಥಿತಿ ಉಂಟಾಗಿದೆ. ಅದರೆ ಪ್ರಸ್ತುತ ಅತ್ತ ನೀರು ಇಲ್ಲ ಇತ್ತ ಚೆಕ್ ಡ್ಯಾಂಗೆ ಖರ್ಚು ಮಾಡಿದ ಹಣವೂ ಇಲ್ಲವಾಗಿದೆ ಅಲ್ಲದೆ ಅಂತರ ಜಲದ ಕುಸಿತವೂ ಸಹ ಉಂಟಾದ ಪರಿಣಾಮ ಬೋರುಗಳ ನೀರು ಸಹ ಇಲ್ಲವಾಗಿದೆ, ಅದ್ದರಿಂದ ಪುರಸಭೆ, ಹಾಗೂ ಸಂಬಂಧ ಪಟ್ಟವರು ಅದಕ್ಕೆ ಸುರಿಯುವ ತ್ಯಾಜ್ಯವನ್ನು ತಡೆದು ಚೆಕ್ ಡ್ಯಾಂ ಉಳಿಸಬೇಕು ಮಲೀನವಾಗುವ ನಾರಿಹಳ್ಳ ಶುದ್ಧವಾಗಬೇಕು, ಎಂಬುದು ಸಾರ್ವಜನಕರ ಒತ್ತಾಯವಾಗಿದೆ.

Leave a Reply

Your email address will not be published. Required fields are marked *

error: Content is protected !!