ಉದಯವಾಹಿನಿ, ಸಿರುಗುಪ್ಪ, : ನಗರದ ಶ್ರೀನಿವಾಸ ಆಂಜನೇಯ ಶನೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಶ್ರೀರಾಮನಿಗೆ ವಿಶೇಷ ಪೂಜೆ ಹಾಗೂ ಎಳ್ಳು ಗಂಟು ದೀಪೋತ್ಸವ ನಡೆಸಿ ಸಂಭ್ರಮಿಸಿದರು.
ಮಕ್ಕಳು ರಾಮ, ಸೀತೆ, ಆಂಜನೇಯ, ಲಕ್ಷ್ಮಣ ಚದ್ಮ ವೇಷ ಧರಿಸಿದ್ದರು. ಶ್ರೀ ಅಭಯ ಆಂಜನೇಯ ಭಜನಾ ಮಂಡಳಿ ವತಿಯಿಂದ ರಾಮಾಂಜನೇಯ ಭಕ್ತಿ ಗೀತೆಗಳು ಹಾಗೂ ರಾಮಾಯಣದ ಗೀತೆಗಳು ಹಾಡಿದರು.
