ಉದಯವಾಹಿನಿ, ಬೆಂಗಳೂರು: ಅಯೋಧ್ಯಗೆ ಹೋಗಬೇಕೆಂಬ ಆಸೆ ಹೊಂದಿರುವ ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಕರ್ನಾಟಕದ ರಾಜ್ಯ ಬಿಜೆಪಿ ಆರಂಭಿಸಿರುವ ರಾಮಮಂದಿರ ದರ್ಶನ ಅಭಿಯಾನದ ಅಂಗವಾಗಿ ಬೆಂಗಳೂರಿನಿಂದ ಮೊದಲ ರೈಲು ಇದೇ ೩೧ರಂದು ಅಯೋಧ್ಯೆಗೆ ಪ್ರಯಾಣ ಬೆಳೆಸಲಿದೆ.
ರಾಮನ ಜನ್ಮಸ್ಥಳವಾದ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾi ಸಿಂಹಾಸನಾರೋಹಣ ಮಾಡಿದ್ದು, ಅಲ್ಲಿ ನಿರಂತರವಾಗಿ ಭಕ್ತ ಸಾಗರವೇ ಹರಿದು ಬರುತ್ತಿದೆ . ರಾಮನೂರಿನಲ್ಲಿ ಅಧಿಕ ಚಳಿ ಇದ್ದರೂ ಅದು ಯಾವುದೋ ಭಕ್ತರ ಮೇಲೆ ಪರಿಣಾಮ ಬೀರಿಲ್ಲ. ಸುಮಾರು ೧೫೦೦ ಜನರನ್ನು ಹೊತ್ತ ರೈಲಿಗೆ ನಿನ್ನೆ ನಿಗದಿತ ಹಣ ಪಾವತಿಸಿ ಬುಕ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುವ ಸಲುವಾಗಿ ರಾಜ್ಯ ಬಿಜೆಪಿ ಈ ಅಭಿಯಾನವನ್ನು ಪ್ರಾರಂಭಿಸಿದೆ, ಇದರಲ್ಲಿ ಸಾರ್ವಜನಿಕರು ಭಾಗವಹಿಸಬಹುದು.
ಇದರ ಭಾಗವಾಗಿ, ರಾಜ್ಯದ ಸುಮಾರು ೩೫ ಸಾವಿರ ಕಾರ್ಯಕರ್ತರು ಶ್ರೀರಾಮನ ದರ್ಶನಕ್ಕಾಗಿ ಜನವರಿ ೩೧ ರಿಂದ ಮಾರ್ಚ್ ೨೫ ರವರೆಗೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು ೨೫ ರೈಲುಗಳಲ್ಲಿ ಅಯೋಧ್ಯೆಗೆ ತೆರಳಲಿದ್ದಾರೆ.
ರಾಮಮಂದಿರ ಲೋಕಾರ್ಪಣೆ ದಿನದಂದು ಅಯೋಧ್ಯೆಯಲ್ಲಿ ದೇವರ ದರ್ಶನಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಅಯೋಧ್ಯೆಗೆ ಭೇಟಿ ನೀಡಲು ಮುಂದಾಗಿದ್ದ ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ತಡೆ ಹಾಕಿದ್ದಾರೆ ಎಂದು ವರದಿಯಾಗಿದೆ.
ರಾಮಭಕ್ತರೊಂದಿಗೆ ದೆಹಲಿಗೆ ಆಗಮಿಸುವ ಮುನ್ನ ಸೂಕ್ತ ಮಾಹಿತಿ ನೀಡಿ ಆಗಮಿಸಿ ಎಂದು ದೇಶವ್ಯಾಪಿ ಬಿಜೆಪಿ ನಾಯಕರಿಗೆ ಯುಪಿ ಸರ್ಕಾರ ಸಲಹೆ ನೀಡಿದೆ.
ಎರಡು ದಿನದಲ್ಲಿ ದೇವಸ್ಥಾನಕ್ಕೆ ೩.೧೭ ಕೋಟಿ ರೂಪಾಯಿ ಸಂಗ್ರಹವಾಗಿದೆ ಎನ್ನಲಾಗಿದೆ.
ನಿತ್ಯ ಲಕ್ಷಾಂತರ ಜನ ಸಾಮಾನ್ಯರು ದೇವರ ದರ್ಶನಕ್ಕೆ ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸಚಿವರು ಹಾಗೂ ರಾಜ್ಯ ಘಟಕಗಳ ಮುಖಂಡರು ಭೇಟಿ ನೀಡಿದರೆ ಭದ್ರತೆ ಒದಗಿಸುವ ಜತೆಗೆ ಜನಸಾಮಾನ್ಯರಿಗೂ ತೊಂದರೆಯಾಗುತ್ತದೆ. ಹಾಗಾಗಿ ಫೆಬ್ರವರಿ ಅಂತ್ಯದವರೆಗೆ ಅಯೋಧ್ಯೆಗೆ ಭೇಟಿ ನೀಡದಂತೆ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಲಹೆ ನೀಡಲಾಗಿದೆ.
