ಉದಯವಾಹಿನಿ,ಕೂಡ್ಲಿಗಿ: ಕೂಲಿ ಕೆಲಸ ಮಾಡುವ ವ್ಯಕ್ತಿಯೋರ್ವ ವಿದ್ಯುತ್ ಕಂಬವೇರಿ ಕೆಲಸಮಾಡುವಾಗ ಹಳೆಯದಾದ ಕಂಬ ಬುಡದಲ್ಲಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಅದಕ್ಕೆ ಹೊಂದಿಕೊಂಡ ಇನ್ನೆರಡು ಕಂಬಗಳು ಮುರಿದು ಬಿದ್ದ ಘಟನೆ ತಾಲೂಕಿನ ಬಯಲು ತುಂಬರಗುದ್ದಿ ಗ್ರಾಮದಲ್ಲಿ ಸೋಮವಾರ ಸಂಜೆ ಜರುಗಿದ್ದು ಕಂಬವೇರಿ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಸಣ್ಣಪುಟ್ಟ ಗಾಯವಾಗಿದ್ದು , ಅದೃಷ್ಟವೆಂಬಂತೆ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜರುಗಿದೆ.
ಗ್ರಾಮದಲ್ಲಿ ವಿದ್ಯುತ್ ತೊಂದರೆ ಇದ್ದ ಕಾರಣ ಅದನ್ನು ಸರಿಪಡಿಸಲು ವ್ಯಕ್ತಿಯೊರ್ವ ಕಂಬವೇರಿ ತಂತಿಗಳನ್ನು ಸರಿಪಡಿಸುವಾಗ ಸುಮಾರು ನಲವತ್ತು ವರ್ಷಕ್ಕೂ ಹಳೆಯ ಕಂಬಗಳಾಗಿದ್ದರಿಂದ ಕಂಬವೇರಿವ ಸಮಯದಲ್ಲಿ ಜೋಲಿ ಹೊಡೆದು ಒಂದು ಕಂಬ ಮುರಿದ್ದಿದ್ದು, ಪಕ್ಕದ ಕಂಬವು ಸಹ ತಂತಿಯ ಸೆಳೆತಕ್ಕೆ ಮುರಿದು ಬಿದ್ದಿದೆ, ಎಂದು ತಿಳಿದಿದೆ.
ಗ್ರಾಮದಲ್ಲಿರುವ 20ಕ್ಕೂ ಹೆಚ್ಚು ಕಂಬಗಳ ಬುಡದಲ್ಲಿ ಸಿಮೆಂಟ್ ಉದುರಿ, ಅದರ ತಂತಿ ತುಕ್ಕು ಹಿಡಿದಿದ್ದು, ಬೀಳುವ ಹಂತ ತಲುಪಿವೆ ಯಾವುದೇ ಕ್ಷಣದಲ್ಲಾದರು ಅನಾಹುತ ಸಂಭವಿಸುವುದು ಕಟ್ಟಿಟ್ಟ ಬುತ್ತಿಯಾಗಿದೆ ಮುಂದಾಗುವ ಈ ಅನಾಹುತಕ್ಕೆ ಹಾಗೂ ಜೀವ ಹಾನಿಗೆ ಯಾರು ಹೊಣೆ ಎಂಬುದನ್ನು ಅರಿತು ಸಂಬಂದಿಸಿದ ಇಲಾಖೆ ಎಚ್ಚೆತ್ತು ಆದಷ್ಟು ಅನಾಹುತ ಆಗುವ ಮೊದಲೇ ಹಳೇ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಿ ಅನಾಹುತ ತಪ್ಪಿಸಬೇಕೆಂದು ಬಯಲು ತುಂಬರಗುದ್ದಿ ಗ್ರಾಮಸ್ಥರ ಒತ್ತಾಯವಾಗಿದೆ.
ಕಾನಹೊಸಹಳ್ಳಿ ವ್ಯಾಪ್ತಿಯ ಬಹುತೇಖ ಹಳ್ಳಿಗಳಲ್ಲಿ ಹಳೆ ಕಂಬಗಳ ತೆರವುಗೊಳಿಸಿ ಹೊಸ ಕಂಬಗಳನ್ನು ಅಳವಡಿಸಲಾಗಿದೆ, ಬಯಲುತುಂಬರಗುದ್ದಿ ಗ್ರಾಮಕ್ಕೆ ಇನ್ನು ನವೀಕರಣವಾಗಿಲ್ಲ ಎಂದು ಹೆಸರೇಳಲು ಇಚ್ಚಿಸದ ಸಿಬ್ಬಂದಿ ಮಾಹಿತಿ ನೀಡಿದರು.
ನಾಲ್ಕು ಕಂಬಗಳನ್ನು ಸದ್ಯ ಹಾಕಲಾಗುವುದು ಉಳಿದಂತೆ ಪರಿಶೀಲನೆ ನಡೆಸಿ ಅಗತ್ಯವಿದಲ್ಲಿ ಹಾಳಾದ ಕಂಬಗಳನ್ನು ಬದಲಿಸಲಾಗುವುದು ಎಂದು ಸೇಕ್ಷನ್ ಅಫೀಸರ್ ಮಾರಪ್ಪ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!