ಉದಯವಾಹಿನಿ ಬೆಂಗಳೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ “ನಾಡೋಜ ಪಾಟೀಲ್ ಪುಟ್ಟಪ್ಪ ಸವಿನೆನಪಿಗಾಗಿ ಕನ್ನಡ ಹೋರಾಟಗಾರ, ಸರ್ವ ಸಮಾನತೆಯ ಪತ್ರಕರ್ತ, ನಾಡಿಗೆ ಸಲ್ಲಿಸಿರುವ ಸಮಾಜ ಸೇವೆ ಗುರುತಿಸಿ ಉದಯವಾಹಿನಿ ದೈನಂದಿನ ಪತ್ರಿಕೆಯ ಸಂಪಾದಕ ಸನ್ಮಾನ್ಯ ಶ್ರೀ ಟಿ. ಹೊಂಬೇಗೌಡ ಅವರು “ನಾಡೋಜ ಪಾಟೀಲ್ ಪುಟ್ಟಪ್ಪ” ಪ್ರಶಸ್ತಿಗೆ ಭಾಜನರಾಗಿದ್ದಾರೆ. ಫೆ.೧೦ ರಂದು
ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಶ್ರೀ ಟಿ. ಹೊಂಬೇಗೌಡರಿಗೆ 2023-24 ಸಾಲಿನ “ನಾಡೋಜ ಪಾಟೀಲ್ ಪುಟ್ಟಪ್ಪ” ಪ್ರಶಸ್ತಿ ದೊರಕಿರುವುದು ನಮ್ಮೆಲ್ಲರಿಗೂ ವಿಶೇಷ ಸಂತಸ ತಂದಿದೆ.
ಉದಯವಾಹಿನಿ ಪತ್ರಿಕಾ ಬಳಗದಿಂದ ಅಭಿನಂದನೆ ತಿಳಿಸಿದ್ದಾರೆ.
