ಉದಯವಾಹಿನಿ, ಕೆಂಗೇರಿ : ೫೦೦ ವರ್ಷಗಳ ನಂತರ ಕನಸು ನನಸಾಗಿದೆ. ರಾಮನ ಜನ್ಮಸ್ಥಾನ ಅಯೋಧ್ಯೆದಲ್ಲಿ ಭವ್ಯ ರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಅದ್ದೂರಿಯಿಂದ ನೆರವೇರಿದೆ ಎಂದು ನೀಧಿ ಪ್ರಾಪರ್ಟಿಸ್ ನ ಚಿದಾನಂದ್ ಯು.ಎಚ್. ತಿಳಿಸಿದರು.
ಶ್ರೀ ರಾಮ ಪ್ರಾಣ ಪ್ರತಿಷ್ಠಾಪನಾ ಅಂಗವಾಗಿ ಮರಿಯಪ್ಪನಪಾಳ್ಯದ ರಾಜಮುಡಿ ಆರ್ಗಾನಿಕ್ಸ್ ಪ್ರೆವೇಟ್ ಲಿಮೀಟೆಡ್ ಹಾಗೂ ನಿಧಿ ಪ್ರಾಪರ್ಟಿಸ್ ವತಿಯಿಂದ ಪೂಜೆ ಹಾಗೂ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. “ಇದು ರಾಮನ ರೂಪದಲ್ಲಿರುವ ರಾಷ್ಟ್ರೀಯ ಪ್ರಜ್ಞೆಯ ದೇವಾಲಯವಾಗಿದೆ. ರಾಮ ಭಾರತದ ನಂಬಿಕೆ, ರಾಮ ಭಾರತದ ಅಡಿಪಾಯ. ರಾಮ ಭಾರತದ ಕಲ್ಪನೆ, ರಾಮ ಭಾರತದ ಕಾನೂನು… ರಾಮ ಭಾರತದ ಪ್ರತಿಷ್ಠೆ, ರಾಮ ಭಾರತದ ವೈಭವ… ರಾಮ ನಾಯಕ ಮತ್ತು ರಾಮ ನೀತಿ. ರಾಮ ಶಾಶ್ವತ… ರಾಮನನ್ನು ಗೌರವಿಸಿದಾಗ, ಅದರ ಪರಿಣಾಮವು ವರ್ಷಗಳು ಅಥವಾ ಶತಮಾನಗಳವರೆಗೆ ಉಳಿಯುವುದಿಲ್ಲ, ಅದರ ಪರಿಣಾಮವು ಸಾವಿರಾರು ವರ್ಷಗಳವರೆಗೆ ಇರುತ್ತದೆ ಎಂದು ಹೇಳಿದರು.
ರಾಜಮುಡಿ ಆರ್ಗಾನಿಕ್ಸ್ ಪ್ರೆವೇಟ್ ಲಿಮಿಟೆಡ್ ಎಂ.ಡಿ. ನಾಗೇಂದ್ರಕುಮಾರ್ ಹಾಗೂ ಆನಂದ್ , ಲಿಖಿತ್, ನಾಗಾರಾಜ್, ಹಾಗೂ ಸಂಘಡಿಗರು ಸೇರಿ ಕಾರ್ಯಕ್ರಮವನ್ನು ಆಯೋಜಿಸಿ ಯಶಸ್ವಿಗೊಳಿಸಿದರು.
