ಉದಯವಾಹಿನಿ, ದೊಡ್ಡಬಳ್ಳಾಪುರ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವೈದ್ಯಕೀಯ ಸಲಹೆಗಾರರಾಗಿ ಡಾ.ಬಿ.ಸಿ.ನರಸಿಂಹಜ್ಞಾನಿ ಅವರನ್ನು ಶುಕ್ರವಾರ ಸರ್ಕಾರ ನೇಮಿಸಿ ಆದೇಶಿಸಿದೆ.
ಎಂಬಿಬಿಎಸ್, ಎಂ.ಡಿ, ಎಫ್‌ಐಸಿಎಂ, ಐಡಿಸಿಸಿಎಂ ವಿದ್ಯಾರ್ಹತೆ ಹೊಂದಿರುವ ಡಾ.ನರಸಿಂಹಜ್ಞಾನಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಉಪಮುಖ್ಯಮಂತ್ರಿ ವೈದ್ಯಕೀಯ ಸಲಹೆಗಾರರಾಗಿ ನೇಮಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ವೈದ್ಯ ಡಾ.ನರಸಿಂಹಜ್ಞಾನಿ, ತಾಲ್ಲೂಕಿನ ಸಾಸಲಿ ಹೋಬಳಿ ಬಂಡಯ್ಯನಪಾಳ್ಯದವರು. ಇಲ್ಲಿನ ಜವಹಾರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಪ್ರಸ್ತುತ ಬೆಂಗಳೂರಿನ ನಾಗರಬಾವಿ ಟ್ರೂಲೈಫ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
