ಉದಯವಾಹಿನಿ, ಬೆಂಗಳೂರು : ನಗರದಲ್ಲಿ ಹೆಚ್ಚಾಗುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಿಸಲು ನಗರ ಸಂಚಾರಿ ಪೊಲೀಸರು ಡ್ರೋನ್ ಕ್ಯಾಮೆರಾ ಮೂಲಕ ಸಮಸ್ಯೆ ತಿಳಿದು ಅದರ ಪರಿಹಾರಕ್ಕೆ ಮುಂದಾಗಿದ್ದಾರೆ. ನಗರದ ಪ್ರಮುಖ ಜಕ್ಷನ್‍ಗ ಳಲ್ಲಿ ಡ್ರೋನ್ ಕ್ಯಾಮರಾಗಳು ಹಾರಾಡಲಿದೆ. ಸದ್ಯ 10 ಡ್ರೋನ್ ಕ್ಯಾಮರಾಗಳನ್ನೂ 10 ಸಂಚಾರ ಉಪ ವಿಭಾಗಕ್ಕೆ ನೀಡಿದ್ದು, ಆಯಾಯ ಉಪ ವಿಭಾಗ ವ್ಯಾಪ್ತಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಈ ಡ್ರೋನ್ ಕ್ಯಾಮೆರಾಗಳನ್ನು ನಿರ್ವಹಣೆ ಮಾಡಲಿದ್ದಾರೆ.
ಉದ್ಯಾನ ನಗರಿ ಬೆಂಗಳೂರು ಈಗ ದೆಹಲಿ, ಮುಂಬೈ ಮಾದರಿಯಲ್ಲಿ ಟ್ರಾಫಿಕ್ ಸಿಟಿ ಆಗುತ್ತಿದೆ. ಬರೋಬ್ಬರಿ 1 ಕೋಟಿಗೂ ಅಧಿಕ ವಾಹನಗಳು ಇದ್ದು, ಪ್ರತಿನಿತ್ಯ ಬೆಂಗಳೂರಿನ ರಸ್ತೆಯಲ್ಲಿ 70 ಲಕ್ಷಕ್ಕೂ ಅಧಿಕ ವಾಹನಗಳು ಸಂಚಾರ ಮಾಡುತ್ತಿವೆ. ಆದ್ದರಿಂದ ಪ್ರಮುಖ ಜಂಕ್ಷನ್‍ಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಇದನ್ನು ತಗ್ಗಿಸಲು ಪೊಲೀಸರು ಡ್ರೋನ್ ಬಳಕೆ ಮಾಡಲು ಮುಂದಾಗಿದ್ದಾರೆ.
ನಗರದ ಮಾರ್ಕೆಟ್ ರಸ್ತೆಗಳು, ಮುಖ್ಯ ಜಂಕ್ಷನ್‍ಗಳಿಗೆ ಸಂಪರ್ಕ ಕಲಿಪಿಸುವ ರಸ್ತೆಗಳಿಗೆ ಬರುವ ವಾಹನಗಳ ಮೇಲೆ ನಿಗಾ, ಸಣ್ಣ ಸಣ್ಣ ರಸ್ತೆಗಳಲ್ಲಿ ವಾಹನ ನಿಲ್ಲಿಸಿರುವುದು, ಕೆಲ ಮುಖ್ಯ ಜಂಕ್ಷನ್‍ಗಳಲ್ಲಿ ಸಿಗ್ನಲ್‍ಗಳಲ್ಲಿ ಯಾವ ಕಡೆ ಹೆಚ್ಚು ವಾಹನಗಳಿವೆ, ಯಾವ ಸಿಗ್ನಲ್ ಬೇಗ ಬಿಡಬೇಕು ಎಂಬ ಮಾಹಿತಿ ಪಡೆಯಲು ಈ ಡ್ರೋನ್ ಕ್ಯಾಮರಾಗಳು ಸಹಾಯವಾಗಲಿದೆ. ಇದರ ಜೊತೆಗೆ ಆ್ಯಂಬುಲೆನ್ಸ್ ಟ್ರಾಫಿಕ್‍ನಲಿ ಸಿಕ್ಕಿ ಹಾಕಿಕೊಂಡ ಸಂದರ್ಭದಲ್ಲಿ ಅದರ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಸಹಾಯವಾಗಲಿದೆ.
ಜಂಕ್ಷನ್‍ಗಳಲ್ಲಿ ಡ್ರೋನ್ ಹಾರಾಟ: ಮೆಜೆಸ್ಟಿಕ್, ಎಂಜಿ ರೋಡ್, ರಾಜಭವನ, ಚಾಲುಕ್ಯ ಸರ್ಕಲ್, ತುಮಕೂರು ರಸ್ತೆ, ಹೆಬ್ಬಾಳ, ಕೋರಮಂಗಲ, ಸಿಲ್ಕ್ ಬೋರ್ಡ್, ಮಾರತ್ತಹಳ್ಳಿ, ಬೆಳ್ಳಂದೂರು ಜಂಕ್ಷನ್‍ಗಳಲ್ಲಿ ಡ್ರೋನ್ ಕ್ಯಾಮೆರಾಗಳು ಹಾರಾಡಲಿವೆ.
