ಉದಯವಾಹಿನಿ, ಬಳ್ಳಾರಿ: ದೇವರ ಪವಾಡೋವೋ, ಆಕಸ್ಮಿಕವಾಗಿ ನಡೆದ ಘಟನೆಯೋ ಗೊತ್ತಿಲ್ಲ. ಅಂತೂ ನಗರದ ಕಾಳಮ್ಮ ದೇವಿಯ ದೇವಸ್ಥಾನದಲ್ಲಿನ ಸೂರ್ಯದೇವರ ವಿಗ್ರಹವೊಂದು ಕಣ್ಣು ತೆರೆದಿರೋ ರೀತಿಯಲ್ಲಿ ಕಾಣುತ್ತಿರುವುದು ಭಕ್ತ ಸಮೂಹದಲ್ಲಿ ಅಚ್ಚರಿ ಮೂಡಿಸಿದೆ.
ಬಳ್ಳಾರಿ ಕಾಳಮ್ಮ ಬೀದಿಯಲ್ಲಿರೋ ಕಾಳಮ್ಮ ದೇವಸ್ಥಾನದಲ್ಲಿ.
ಕಾಳಮ್ಮ ದೇವಸ್ಥಾನದ ನವಗ್ರಹದ ಒಳಗಿರೋ ಸೂರ್ಯನ ವಿಗ್ರಹ ಕಣ್ಣು ತೆರೆದಿರೋ ಹಾಗೇ ಕಾಣ್ತಿದೆ.
ದೇವಸ್ಥಾನದ ಅರ್ಚಕರು ಬೆಳಿಗ್ಗೆ ಅಭಿಷೇಕ ಮಾಡುವಾಗ ಕಣ್ಣು ತೆರೆದ ರೀತಿಯಲ್ಲಿ ಕಂಡಿದೆ.ವಿಗ್ರಹದ ಮೇಲೆ ನೀರು ಹಾಕಿದಾಗಲೂ ಒಂದು ಕಣ್ಣು ಮಾತ್ರ ತೆರೆದಿರೋ ರೀತಿಯಲ್ಲಿ ಕಾಣ್ತಿದೆ.
ವಿಗ್ರಹದ ಮಾಡುವವರ ವಿಶೇಷತೆ ಎನ್ನುವದು ಒಬ್ಬರ ವಾದವಾದ್ರೇ ನೋಡುಗರ ದೃಷ್ಟಿಯಿಂದ ಹಾಗೇ ಕಾಣ್ತದೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಈ ವಿಷಯ ಜನರ ಬಾಯಲ್ಲಿ ಬರ್ಜರಿಯಾಗಿ ಹರಿದಾಡುತ್ತಿದೆ.
