ಉದಯವಾಹಿನಿ,ಕಲಬುರಗಿ : ದೇವನಗರಿ ದಾವಣಗೆರೆ ನಗರದ ಬಕೇಶ್ವರ ದೇವಸ್ಥಾನದಲ್ಲಿ ಜರುಗಿದ ಹೆಬ್ಬಾಳು ಮಹಾರುದ್ರ ಶಿವಯೋಗಿಗಳ ಪುರಾಣದಲ್ಲಿ ಪುರಾಣ ಪ್ರವಚನ ಸಂಗೀತ ಸೇವೆಯನ್ನು ನೀಡಿದ ಪುಟ್ಟರಾಜ ಕವಿ ಶಿವಯೋಗಿಗಳ ಶಿಷ್ಯರಾದ ಕಲ್ಯಾಣ ನಾಡಿನ ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಸುಂಟನೂರ ಗ್ರಾಮದ ಸಂಸ್ಥಾನ ಹಿರೇಮಠ ಬಂಡಯ್ಯ ಶಾಸ್ತ್ರಿಗಳಿಗೆ ” ಸುಶೀಲ ಶ್ರೀ ಪ್ರಶಸ್ತಿ”, ಚಲಗೇರಿ ಗ್ರಾಮದ ಬಸವರಾಜ ಹಜೇರಿ ಅವರಿಗೆ “ಕಾಯಕರತ್ನ” ಪ್ರಶಸ್ತಿ, ಸ್ವಂತ ಗ್ರಾಮದ ಸಂಗಮೇಶ ನೀಲಾ ಅವರಿಗೆ ” ಮಾತಾಪಿತ್ರು ಸಿರಿ” ಪ್ರಶಸ್ತಿಯನ್ನು ದಾವಣಗೆರೆ ನಗರದ ಮುರುಗೇಂದ್ರ ಶಿವಯೋಗಿಗಳ ಸಾಂಸ್ಕøತಿಕ ಸಂಘ ಮತ್ತು ಶ್ರೀ ಗುರು ಬಕ್ಕೇಶ್ವರ ಸೇವಾ ಸಮಿತಿ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಒಡೆಯರಾದ ಡಾ. ಕಲ್ಲಯ್ಯ ಅಜ್ಜನವರು, ಜಂಬಗಿಯ ಚನ್ನವೀರಯ್ಯ ಸ್ವಾಮಿಜೀ ಅವರು ಉಪಸ್ಥಿತರಿದ್ದರು.
