udayavahiniಉದಯವಾಹಿನಿ,ಜೇವರ್ಗಿ: ಇಂದಿನ ವಿದ್ಯಾರ್ಥಿಗಳೇ, ನಾಳಿನ ನಾಗರಿಕರಾಗಿರುವದರಿಂದ, ವಿದ್ಯಾರ್ಥಿ ದೆಸೆಯಿಂದಲೇ ಶಿಸ್ತು, ದೇಶಭಕ್ತಿ, ರಾಷ್ಟ್ರೀಯ ಪ್ರಜ್ಞೆ,ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಸಮಯಪ್ರಜ್ಞೆ,ಬದ್ದತೆ,ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಾಯಕತ್ವದ ಗುಣಗಳು, ನಿರಂತರ ಪ್ರಯತ್ನ ಅಂತಹ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳುವಂತೆ ಮಾಡಿ ದೇಶದ ಅಮೂಲ್ಯ ಮಾನವ ಸಂಪತ್ತನ್ನಾಗಿಸುವ ಮೂಲಕ ರಾಷ್ಟ್ರೀಯ ಸೇವಾ ಯೋಜನೆಯು ದೇಶ ಕಟ್ಟುವ ಕಾರ್ಯಕ್ಕೆ ತನ್ನದೇ ಆದ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡುತ್ತಿದೆ ಎಂದು ಸ್ಥಳೀಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಶಿವಶರಣಪ್ಪ ಮಸ್ಕನಳ್ಳಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಸರ್ಕಾರಿ ಪಿಯು ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಶನಿವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆಯ ೫೩ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ ಮಾತನಾಡಿ, ಮಹಾತ್ಮ ಗಾಂಧಿಜೀಯವರ ಕನಸಿನ ಕೂಸಾದ ಎನ್.ಎಸ್.ಎಸ್ ಅವರ ಜನ್ಮಶತಮಾನೋತ್ಸವ ವರ್ಷವಾದ ೧೯೬೯ರಲ್ಲಿ ಅಂದಿನ ಶಿಕ್ಷಣ ಸಚಿವರಾದಡಾ.ವಿ.ಕೆ.ಆರ್.ವಿ.ರಾವ್ ಚಾಲನೆ ನೀಡಿದರು. ಇದು ನಾನು ಸದಾ ಸಿದ್ಧ ಎಂಬ ಅರ್ಥವನ್ನು ನೀಡುತ್ತದೆ.ನನಗಾಗಿ ಅಲ್ಲ,ನಿಮಗಾಗಿ ಎಂಬ ಧ್ಯೇಯ ವಾಕ್ಯವನ್ನು ಹೊಂದಿದೆ. ಶಾಂತಿ, ತ್ಯಾಗ, ಪ್ರಗತಿಯ ಸಂಕೇತದ ಚಕ್ರ ಹೊಂದಿರುವ ಚಿಹ್ನೆ ಇದೆ.ವಿದ್ಯಾರ್ಥಿ ದೆಸೆಯಿಂದಲೇ ಉನ್ನತ ವ್ಯಕ್ತಿತ್ವ ನಿರ್ಮಾಣದ ಬಗೆಯನ್ನು ಅರಿತು, ದೇಶಸೇವೆ ಮಾಡಲು ಇದು ಪ್ರೇರಣೆ ನೀಡುತ್ತದೆ ಎಂದರು.ಭ್ರಾತೃತ್ವ ಭಾವನೆ, ಸಮಾನತೆ, ಜಾತ್ಯಾತೀತತೆ,ವೈಜ್ಞಾನಿಕ, ವೈಚಾರಿಕತೆ ಮನೋಭಾವ ಬೆಳೆಸುತ್ತದೆ. ಕಂದಾಚಾರ, ಮೂಢನಂಬಿಕೆಗಳನ್ನು ನಿರ್ಮೂಲನೆ ಮಾಡುತ್ತದೆ.ಪರಿಸರ ಕಾಪಾಡುವುದು, ಸ್ವಚ್ಛತೆ, ಜನ ಜಾಗೃತಿ ಮೂಡಿಸುವ ಮೂಲಕ ಸ್ವಾವಲಂಬನೆ ಬದುಕನ್ನು ರೂಪಿಸಿಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಒಂದು ಉತ್ತಮ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಮಾಡಿಕೊಂಡು ಉನ್ನತ ವ್ಯಕ್ತಿಗಳಾಗಿ ಹೊರಹೊಮ್ಮಿ ಎಂದು ಎನ್.ಎಸ್.ಎಸ್ ಸ್ಥಾಪನೆಯ ಹಿನ್ನಲೆ, ಉದ್ದೇಶಗಳು, ಗುರಿಗಳು, ಸಾಧನೆ, ಸ್ವಯಂ ಸೇವಕರ ಪಾತ್ರ ಸೇರಿದಂತೆ ಅನೇಕ ಅಂಶಗಳ ಕುರಿತು ಸುದೀರ್ಘವಾಗಿ ವಿವರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಸಿಬಿಸಿ ಉಪಾಧ್ಯಕ್ಷ ರವೀಂದ್ರ ವೈ.ಕೋಳಕೂರ, ಪ್ರಭಾರಿ ಪ್ರಾಚಾರ್ಯೆ ಶರಣಮ್ಮ ಭಾವಿಕಟ್ಟಿ,ಉಪನ್ಯಾಸಕರಾದ ಚಂದ್ರಪ್ರಭ ಕಮಲಾಪುರಕರ್, ನಯಿಮಾ ನಾಹಿದ್,ಶಂಕ್ರೆಪ್ಪ ಹೊಸದೊಡ್ಡಿ,ರಂಜಿತಾ ಠಾಕೂರ್, ನೂಜತ್ ಬೇಗಂ ಹಾಗೂ ಎನ್.ಎಸ್.ಎಸ್ ಘಟಕದ ಸ್ವಯಂ ಸೇವಕರು ಭಾಗವಹಿಸಿದ್ದರು.
ಸ್ವಯಂ ಸೇವಕರಾದ ಶಿವಲೀಲಾ ಮತ್ತು ಮಹಾಲಕ್ಷ್ಮಿ ಭ್ರಾತೃತ್ವ ಗೀತೆ ಹಾಡಿದರು.

Leave a Reply

Your email address will not be published. Required fields are marked *

error: Content is protected !!